Publish Date: Fri, 03 Mar 2023 (09:00 IST)
Updated Date: Fri, 03 Mar 2023 (09:06 IST)
ಬೆಂಗಳೂರು: ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೊರಗುತ್ತಿಗೆ ನೌಕರರು ತಮ್ಮ ಸೇವೆ ಖಾಯಂಗೊಳಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಗೆ ನಟ ಅನಿರುದ್ಧ್ ಜತ್ಕಾರ್ ಸಾಥ್ ನೀಡಿದ್ದಾರೆ.
ಸ್ವಾತಂತ್ರ್ಯ ಉದ್ಯಾನವನ ಬಳಿ ಕಳೆದ 15 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ನೌಕರರನ್ನು ಭೇಟಿಯಾಗಿರುವ ನಟ ಅನಿರುದ್ಧ್ ಅವರ ಪರವಾಗಿ ಮಾತನಾಡಿದ್ದಾರೆ.
ಕೊರೋನಾ ಸಂದರ್ಭದಲ್ಲಿ ಇವರೆಲ್ಲರೂ ತಮ್ಮ ಸ್ವಾರ್ಥ ಮರೆತು ನಮಗಾಗಿ ಕೆಲಸ ಮಾಡಿದ್ದಾರೆ. ಕೊರೋನಾ ವೇಳೆ ನಮ್ಮ ಪಾಲಿಗೆ ದೇವರಾದವರು ಇಂದು ರಸ್ತೆಯಲ್ಲಿ ನಿಂತಿರುವುದು ಬೇಸರದ ಸಂಗತಿ. ಬೇರೆ ರಾಜ್ಯಗಳಂತೆ ನಮ್ಮ ರಾಜ್ಯದಲ್ಲೂ ಈ ನೌಕರರ ಸೇವೆ ಖಾಯಂಗೊಳಿಸುವಂತೆ ನಾನು ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದೇನೆ ಎಂದು ಅನಿರುದ್ಧ್ ಹೇಳಿಕೆ ನೀಡಿದ್ದಾರೆ.