Select Your Language

Notifications

webdunia
webdunia
webdunia
webdunia

ತಾತ ಡಾ.ರಾಜ್ ಪ್ರತಿಮೆ ಮುಂದೆಯೇ ಮೊಮ್ಮಗ ಯುವ ಸಿನಿಮಾ ಟೈಟಲ್ ಘೋಷಣೆ

ತಾತ ಡಾ.ರಾಜ್ ಪ್ರತಿಮೆ ಮುಂದೆಯೇ ಮೊಮ್ಮಗ ಯುವ ಸಿನಿಮಾ ಟೈಟಲ್ ಘೋಷಣೆ
ಬೆಂಗಳೂರು , ಗುರುವಾರ, 2 ಮಾರ್ಚ್ 2023 (09:00 IST)
ಬೆಂಗಳೂರು: ಅಭಿಮಾನಿಗಳ ಪ್ರೀತಿಯ ಅಣ್ಣಾವ್ರು ಡಾ.ರಾಜ್ ಕುಮಾರ್ ಕುಟುಂಬದ ಮತ್ತೊಬ್ಬ ಕುಡಿ, ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವ ರಾಜ್ ಕುಮಾರ್ ಮೊದಲ ಸಿನಿಮಾ ಬಗ್ಗೆ ಕೊನೆಗೂ ಅಪ್ ಡೇಟ್ ಸಿಕ್ಕಿದೆ.

ಹೊಂಬಾಳೆ ಫಿಲಂಸ್ ಯುವರಾಜ್ ಕುಮಾರ್ ಚೊಚ್ಚಲ ಸಿನಿಮಾಗೆ ಬಂಡವಾಳ ಹೂಡುತ್ತಿದೆ. ಈ ಸಿನಿಮಾಗೆ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡುತ್ತಿದ್ದಾರೆ.

ಆದರೆ ಈ ಸಿನಿಮಾ ಟೈಟಲ್ ಮತ್ತಿತರ ವಿಚಾರಗಳ ಬಗ್ಗೆ ಇದುವರೆಗೆ ಚಿತ್ರತಂಡ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಇದೀಗ ಮಾರ್ಚ್ 3 ರಂದು ಕುರುಬನಹಳ್ಳಿಯಲ್ಲಿರುವ ಅಣ್ಣಾವ್ರ ಪ್ರತಿಮೆ ಮುಂದೆ ಟೈಟಲ್ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನಿಸಿದೆ. ಇದು ದೊಡ್ಮನೆ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಕರ್ ನಲ್ಲಿ ನಾಟ್ಟು,ನಾಟ್ಟು ಲೈವ್ ಪರ್ಫಾರ್ಮೆನ್ಸ್: ಹಾಡುವವರು ಯಾರು?