Publish Date: Wed, 01 Mar 2023 (08:50 IST)
Updated Date: Wed, 01 Mar 2023 (09:01 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ನಟಿಮಣಿಯರು ತಮ್ಮದೇ ಬ್ಯುಟೀಕ್ ಅಥವಾ ಡಿಸೈನರ್ ಬ್ರ್ಯಾಂಡ್ ಹೊರತಂದು ತಮ್ಮದೇ ಸ್ವಂತ ಉದ್ದಿಮೆ ಆರಂಭಿಸುವುದು ಟ್ರೆಂಡ್ ಆಗಿದೆ.
ಇದೀಗ ನಟಿ ಕವಿತಾ ಗೌಡ ಕೂಡಾ ಅದೇ ಹಾದಿಯಲ್ಲಿದ್ದಾರೆ. ಕವಿತಾ ಪತಿ, ನಟ ಚಂದನ್ ಕುಮಾರ್ ಈಗಾಗಲೇ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮದೇ ಮೂರು ಹೋಟೆಲ್ ಆರಂಭಿಸಿದ್ದಾರೆ.
ಇದೀಗ ಕವಿತಾ ಕೂಡಾ ಗಂಡನ ಹಾದಿಯಲ್ಲೇ ತೊಡಗಿಸಿಕೊಂಡಿದ್ದು, ನಟನೆ ಜೊತೆಗೆ ಮೇಕ್ ಓವರ್ ಸ್ಟುಡಿಯೋ ಆರಂಭಿಸಿದ್ದಾರೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಇದನ್ನು ಲಾಂಚ್ ಮಾಡಿದ್ದಾರೆ. ಆ ಮೂಲಕ ಗಂಡನಂತೇ ನಟನಾ ವೃತ್ತಿ ಜೊತೆಗೆ ಸ್ವಂತ ಉದ್ಯಮಕ್ಕೆ ಕೈ ಹಾಕಿದ್ದಾರೆ.