Publish Date: Sun, 26 Feb 2023 (09:20 IST)
Updated Date: Sun, 26 Feb 2023 (09:28 IST)
ಬೆಂಗಳೂರು: ಕಾಂತಾರ ಸಿನಿಮಾ ಮೂಲಕ ಎಲ್ಲರ ಮನಗೆದ್ದ ಸರಳ ಸುಂದರಿ ಸಪ್ತಮಿ ಗೌಡ ಈಗ ಏನು ಮಾಡ್ತಿದ್ದಾರೆ ಗೊತ್ತಾ?
ಕಾಂತಾರ ಬಳಿಕ ಸಪ್ತಮಿಗೆ ಪರಭಾಷೆಗಳಿಂದಲೂ ಸಾಕಷ್ಟು ಆಫರ್ ಬರುತ್ತಿದೆ. ಪಕ್ಕಾ ಮನೆ ಮಗಳ ಇಮೇಜ್ ನ ಹುಡುಗಿ ಸಪ್ತಮಿ ಈಗ ಎರಡು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.
ಸದ್ಯಕ್ಕೆ ಸಪ್ತಮಿ ಹೈದರಾಬಾದ್ ನಲ್ಲಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ವಾಕ್ಸಿನ್ ವಾರ್ ಸಿನಿಮಾ ಶೂಟಿಂಗ್ ನಲ್ಲಿದ್ದಾರೆ. ಇದಾದ ಬಳಿಕ ಸಪ್ತಮಿ ಅಭಿಷೇಕ್ ಅಂಬರೀಶ್ ಅವರ ಹೊಸ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ. ಇದರ ನಡುವೆ ಇತ್ತೀಚೆಗೆ ಬ್ಯುಸಿನೆಸ್ ವುಮನ್ ಅವತಾರದಲ್ಲಿ ಫೋಟೋ ಶೂಟ್ ಮಾಡಿಸಿಕೊಂಡು ಸಪ್ತಮಿ ಎಲ್ಲರ ಗಮನ ಸೆಳೆದಿದ್ದರು.