ಬೆಂಗಳೂರು: ಕೆಲವು ದಿನಗಳ ಹಿಂದೆ ರಿಷಬ್ ಶೆಟ್ಟಿ ಜೊತೆ ಬಾಲಿವುಡ್ ತಾರೆ ಊರ್ವಶಿ ರೌಟೇಲಾ ಫೋಟೋವೊಂದು ವೈರಲ್ ಆಗಿತ್ತು. ಹೀಗಾಗಿ ಊರ್ವಶಿ ಕಾಂತಾರ 2 ನಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
ಈ ಬಗ್ಗೆ ಇದೀಗ ರಿಷಬ್ ಶೆಟ್ಟಿ ಮಾಧ್ಯಮಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಊರ್ವಶಿ ಕಾಂತಾರ 2 ಭಾಗವಾಗಲಿದ್ದಾರೆಯೇ ಎಂಬ ಪ್ರಶ್ನೆಗೆ ರಿಷಬ್ ಉತ್ತರ ನೀಡಿದ್ದಾರೆ.
ಆವತ್ತು ಊರ್ವಶಿ ಜೊತೆ ಕೇವಲ ಸೆಲ್ಫೀ ತೆಗೆಸಿಕೊಂಡಿದ್ದಷ್ಟೇ. ಅವರು ಕಾಂತಾರ 2 ಸಿನಿಮಾ ಭಾಗವಾಗುತ್ತಿಲ್ಲ. ಇದೆಲ್ಲಾ ರೂಮರ್ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಸೂಪರ್ ಸ್ಟಾರ್ ರಜನೀಕಾಂತ್ ವಿಶೇಷ ಪಾತ್ರ ಮಾಡಬಹುದು ಎಂಬ ಸುದ್ದಿಯಿರುವುದಂತೂ ನಿಜ.