Select Your Language

Notifications

webdunia
webdunia
webdunia
webdunia

ಸಲಾರ್ ನಲ್ಲಿ ಕರ್ತವ್ಯ ಮುಗಿಸಿದ ಶ್ರುತಿ, ಇನ್ನೀಗ ಪ್ರಭಾಸ್ ಸರದಿ

ಸಲಾರ್ ನಲ್ಲಿ ಕರ್ತವ್ಯ ಮುಗಿಸಿದ ಶ್ರುತಿ, ಇನ್ನೀಗ ಪ್ರಭಾಸ್ ಸರದಿ
ಹೈದರಾಬಾದ್ , ಶನಿವಾರ, 25 ಫೆಬ್ರವರಿ 2023 (09:00 IST)
Photo Courtesy: Twitter
ಹೈದರಾಬಾದ್: ಹೊಂಬಾಳೆ ಫಿಲಂಸ್ ನಿರ್ಮಾಣದ, ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದ ತಮ್ಮ ಭಾಗದ ಶೂಟಿಂಗ್ ನ್ನು ನಾಯಕಿ ನಟಿ ಶ್ರುತಿ ಹಾಸನ್ ಮುಗಿಸಿಕೊಟ್ಟಿದ್ದಾರೆ.

ನಾಯಕ ಪ್ರಭಾಸ್ ಭಾಗದ ಮೊದಲನೇ ಹಂತದ ಚಿತ್ರೀಕರಣ ಈಗಾಗಲೇ ಮುಗಿದಿತ್ತು. ಇದೀಗ ಪ್ರಭಾಸ್ ಎರಡನೇ ಹಂತದಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು, ಇನ್ನು ಒಂದು ತಿಂಗಳಲ್ಲಿ ಪ್ರಭಾಸ್ ಕೂಡಾ ಚಿತ್ರೀಕರಣ ಮುಗಿಸಿಕೊಡಲಿದ್ದಾರೆ ಎನ್ನಲಾಗಿದೆ.

ಇದೇ ವರ್ಷ ಸೆಪ್ಟೆಂಬರ್ ನಲ್ಲಿ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಇದಕ್ಕೆ ಮೊದಲು ಚಿತ್ರತಂಡ ಸಾಕಷ್ಟು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮಾಡಬೇಕಿದೆ. ಹೀಗಾಗಿ ಶೀಘ್ರದಲ್ಲೇ ಶೂಟಿಂಗ್ ಮುಗಿಸಿ ಮುಂದಿನ ಕೆಲಸಗಳತ್ತ ಗಮನಹರಿಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಸಿಸಿ ಟೂರ್ನಿಯಲ್ಲಿ ಬೃಹತ್ ಕನ್ನಡ ಬಾವುಟ ಅನಾವರಣ: ಏನಿದರ ವಿಶೇಷ?