Select Your Language

Notifications

webdunia
webdunia
webdunia
webdunia

ಕೃತಿ ಸನನ್ ಜೊತೆ ಪ್ರಭಾಸ್ ಮುಂದಿನ ವಾರ ಎಂಗೇಜ್ ಮೆಂಟ್?!

ಪ್ರಭಾಸ್
Photo Courtesy: Twitter
ಹೈದರಾಬಾದ್: ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಮದುವೆ ಬಗ್ಗೆ ಕಳೆದೊಂದಷ್ಟು ವರ್ಷದಿಂದ ಆಗಾಗ ಗಾಸಿಪ್ ಹರಿದಾಡುತ್ತಲೇ ಇದೆ. ಆದರೆ ಇದುವರೆಗೆ ಪ್ರಭಾಸ್ ತಮ್ಮ ಮದುವೆಯನ್ನು ಮುಂದೂಡುತ್ತಲೇ ಇದ್ದಾರೆ.

ಇದೀಗ ಪ್ರಭಾಸ್ ಆದಿಪುರುಷ್ ಸಿನಿಮಾದಲ್ಲಿ ತಮ್ಮ ನಾಯಕಿಯಾಗಿ ಅಭಿನಯಿಸಿರುವ ಕೃತಿ ಸನನ್ ಜೊತೆ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮುಂದಿನ ವಾರ ಇಬ್ಬರೂ ಮಾಲ್ಡೀವ್ಸ್ ನಲ್ಲಿ ಎಂಗೇಜ್ ಮೆಂಟ್ ಮಾಡಿಕೊಳ್ಳಲಿದ್ದಾರೆ ಎಂಬ ಟ್ವೀಟ್ ಒಂದು ವೈರಲ್ ಆಗಿದೆ.

ಕೆಲವು ದಿನಗಳ ಮೊದಲು ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಇಬ್ಬರೂ ಇದಕ್ಕೆ ಸ್ಪಷ್ಟನೆ ನೀಡುವ ಗೌಜಿಗೇ ಹೋಗಿರಲಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ವಾರಿಸು ಒಟಿಟಿ ರಿಲೀಸ್ ದಿನಾಂಕ ಬಹಿರಂಗ