ಬೆಂಗಳೂರು: ನಟ ದುನಿಯಾ ವಿಜಯ್ ತೆಲುಗಿನ ವೀರಸಿಂಹ ರೆಡ್ಡಿ ಸಿನಿಮಾದಲ್ಲಿ ನಟಿಸಿದ್ದು, ಅದೀಗ ಥಿಯೇಟರ್ ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಸೂಪರ್ ಸ್ಟಾರ್ ಬಾಲಕೃಷ್ಣ ನಾಯಕರಾಗಿರುವ ಸಿನಿಮಾದಲ್ಲಿ ದುನಿಯಾ ವಿಜಯ್ ಖಡಕ್ ವಿಲನ್ ಆಗಿ ಪಾತ್ರ ಮಾಡಿದ್ದಾರೆ. ಇದು ಕನ್ನಡಿಗರಿಗೆ ಖುಷಿಯ ವಿಚಾರವೇ.
ಹಾಗಿದ್ದರೂ ಇತ್ತೀಚೆಗೆ ದುನಿಯಾ ವಿಜಯ್ ಅಭಿನಯದ ದೃಶ್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳೂ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರದಲ್ಲಿ ವಿಜಯ್ ತಲೆ ಕಡಿದು ನಾಯಕ ಬಾಲಯ್ಯ ಚೆಂಡಾಡುವ ದೃಶ್ಯವಿದೆ. ದುನಿಯಾ ವಿಜಯ್ ರನ್ನು ಕನ್ನಡದಲ್ಲಿ ಜನ ಹೀರೋ ಆಗಿ ನೋಡುತ್ತಾರೆ. ಅಂತಹ ನಟ ಇಂತಹ ದೃಶ್ಯಗಳಲ್ಲಿ ಅಭಿನಯಿಸುವ ಮುನ್ನ ಅಭಿಮಾನಿಗಳ ಬಗ್ಗೆ ಯೋಚನೆ ಮಾಡಬೇಕಿತ್ತು ಎಂಬುದು ಕೆಲವರ ಅಭಿಪ್ರಾಯವಾಗಿದೆ. ಬೇರೆ ಭಾಷೆಗೆ ಹೋದರೂ ಇಂತಹ ದೃಶ್ಯಗಳಲ್ಲಿ ನಾನು ಅಭಿನಯಿಸಲ್ಲ ಎಂದು ವಿಜಿ ಹೇಳಬೇಕು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಬೇರೆ ಭಾಷೆಗೆ ಹೋಗಿ ಒದೆ ತಿನ್ನುವ ದೃಶ್ಯ ಬೇಡ ಎಂದು ಅಭಿಪ್ರಾಯಪಡುತ್ತಿದ್ದಾರೆ.