Select Your Language

Notifications

webdunia
webdunia
webdunia
webdunia

ಮಾರ್ಟಿನ್ ಟೀಸರ್ ನಲ್ಲಿ ಧ್ರುವ ಸರ್ಜಾ ನೋಡಿ ಪ್ರೇಕ್ಷಕರಿಗೆ ಶಾಕ್!

ಧ್ರುವ ಸರ್ಜಾ
ಬೆಂಗಳೂರು , ಶುಕ್ರವಾರ, 24 ಫೆಬ್ರವರಿ 2023 (09:20 IST)
Photo Courtesy: Twitter
ಬೆಂಗಳೂರು: ಬಹುನಿರೀಕ್ಷಿತ ಮಾರ್ಟಿನ್ ಸಿನಿಮಾದ ಟೀಸರ್ ನಿನ್ನೆ ಥಿಯೇಟರ್ ನಲ್ಲಿ ಮತ್ತು ಯೂ ಟ್ಯೂಬ್ ವಾಹಿನಿಯಲ್ಲಿ ಬಿಡುಗಡೆಯಾಗಿದೆ.

ಮೊದಲು ವೀರೇಶ್ ಚಿತ್ರಮಂದಿರದಲ್ಲಿ ಹಣ ಪಾವತಿ ಮಾಡಿ ಟೀಸರ್ ಶೋ ವೀಕ್ಷಿಸಲು ಅಭಿಮಾನಿಗಳಿಗೆ ಅವಕಾಶ ನೀಡಲಾಗಿತ್ತು. ಈ ಶೋನಿಂದ ಬಂದ ಹಣವನ್ನು ಸತ್ಕಾರ್ಯಕ್ಕೆ ಬಳಸಲು ಚಿತ್ರತಂಡ ತೀರ್ಮಾನಿಸಿತ್ತು.

ಟೀಸರ್ ನಲ್ಲಿ ಧ್ರುವ ಸರ್ಜಾ ಸಖತ್ ಮೈಕಟ್ಟು, ಫೈಟಿಂಗ್ ನೋಡಿ ಪ್ರೇಕ್ಷಕರು ನಿಜಕ್ಕೂ ಥ್ರಿಲ್ ಆಗಿದ್ದಾರೆ. ಮೈನವಿರೇಳಿಸುವ ಸಾಹಸ ದೃಶ್ಯಗಳು, ಧ್ರುವ ಸರ್ಜಾ ಸಖತ್ ಫೈಟ್ ದೃಶ್ಯಗಳು ಟೀಸರ್ ನಲ್ಲಿವೆ. ಟೀಸರ್ ನೋಡಿದರೆ ಸಾಹಸ ದೃಶ್ಯಗಳಿಗೆ ಚಿತ್ರತಂಡ ಮಾಡಿರುವ ಶ್ರಮ ಎದ್ದು ಕಾಣುತ್ತದೆ. ಈ ಸಿನಿಮಾವೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮತ್ತೆ ಕನ್ನಡ ಸಿನಿಮಾವನ್ನು ಹೆಮ್ಮೆಪಡುವಂತೆ ಮಾಡುವುದರಲ್ಲಿ ಸಂಶಯವಿಲ್ಲ ಎನಿಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕಾದಲ್ಲಿ ಅಯ್ಯಪ್ಪ ಮಾಲೆ ಬಿಟ್ಟು ಸೂಟು ಬೂಟು ಧರಿಸಿದ ರಾಮ್ ಚರಣ್ ತೇಜ