Select Your Language

Notifications

webdunia
webdunia
webdunia
webdunia

ಅಮೆರಿಕಾದಲ್ಲಿ ಅಯ್ಯಪ್ಪ ಮಾಲೆ ಬಿಟ್ಟು ಸೂಟು ಬೂಟು ಧರಿಸಿದ ರಾಮ್ ಚರಣ್ ತೇಜ

ಅಮೆರಿಕಾದಲ್ಲಿ ಅಯ್ಯಪ್ಪ ಮಾಲೆ ಬಿಟ್ಟು ಸೂಟು ಬೂಟು ಧರಿಸಿದ ರಾಮ್ ಚರಣ್ ತೇಜ
ಹೈದರಾಬಾದ್ , ಶುಕ್ರವಾರ, 24 ಫೆಬ್ರವರಿ 2023 (09:10 IST)
Photo Courtesy: Twitter
ಹೈದರಾಬಾದ್: ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ ತೇಜ ಇತ್ತೀಚೆಗೆ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಮೆರಿಕಾಗೆ ಪ್ರಯಾಣಿಸುವಾಗಲೂ ಅಯ್ಯಪ್ಪ ವ್ರತಧಾರಿಯಾಗಿ ತೆರಳಿದ್ದು ಎಲ್ಲರ ಗಮನ ಸೆಳೆದಿತ್ತು.

ಕಳೆದ ಕೆಲವು ದಿನಗಳ ಹಿಂದೆ ಅಯ್ಯಪ್ಪ ವ್ರತ ಕೈಗೊಂಡಿದ್ದ ರಾಮ್ ಚರಣ್ ಅಮೆರಿಕಾಗೂ ಬರಿಗಾಲಲ್ಲಿ ತೆರಳಿದ್ದರು. ಅವರ ಅಯ್ಯಪ್ಪ ಭಕ್ತಿಯನ್ನು ನೆಟ್ಟಿಗರು ಕೊಂಡಾಡಿದ್ದರು.

ಆದರೆ ಅಮೆರಿಕಾಗೆ ತಲುಪಿದೊಡನೆ ರಾಮ್ ಚರಣ್ ಉಡುಪು ಬದಲಾಗಿದೆ. ಶೋ ಒಂದರಲ್ಲಿ ಪಾಲ್ಗೊಂಡಿದ್ದ ರಾಮ್ ಚರಣ್ ಎಂದಿನಂತೆ ಸೂಟು ಬೂಟಿನಲ್ಲಿ ಕಂಗೊಳಿಸಿದ್ದಾರೆ. ಇದರಿಂದ ಹಲವರು ಅಮೆರಿಕಾ ತಲುಪಿದೊಡನೆ ಅಯ್ಯಪ್ಪ ವ್ರತ ಮರೆತು ಹೋಯಿತಾ ಎಂದು ಪ್ರಶ್ನೆ ಮಾಡಿದ್ದರು.

ಅಸಲಿಗೆ ರಾಮ್ ಚರಣ್ ತೇಜ 21 ದಿನಗಳ ವ್ರತ ಕೈಗೊಂಡಿದ್ದರಂತೆ. ಅಮೆರಿಕಾದಲ್ಲಿ ಅಯ್ಯಪ್ಪನ ಸನ್ನಿಧಿಯೊಂದರಲ್ಲಿ ಮಾಲೆ ತೆಗೆದಿದ್ದಾರೆ. ಹೀಗಾಗಿ ಈಗ ಮಾಮೂಲಿನಂತೆ ಸೂಟು ಬೂಟು ಹಾಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಕೆಸಿಸಿ ಕ್ರಿಕೆಟ್ ಕದನ: ಕಿಚ್ಚ, ಶಿವಣ್ಣನ ಕ್ರಿಕೆಟ್ ಖದರ್