Select Your Language

Notifications

webdunia
webdunia
webdunia
webdunia

ಮುಂದಿನ ತಿಂಗಳು ಈಡೇರುತ್ತಾ ಯಶ್ ಫ್ಯಾನ್ಸ್ ಬೇಡಿಕೆ?

ಮುಂದಿನ ತಿಂಗಳು ಈಡೇರುತ್ತಾ ಯಶ್ ಫ್ಯಾನ್ಸ್ ಬೇಡಿಕೆ?
ಬೆಂಗಳೂರು , ಗುರುವಾರ, 23 ಫೆಬ್ರವರಿ 2023 (08:50 IST)
Photo Courtesy: Twitter
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ 19 ನೇ ಸಿನಿಮಾ ಘೋಷಣೆಗಾಗಿ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಆದರೆ ಇದುವರೆಗೆ ಯಶ್ ಸುಳಿವು ಬಿಟ್ಟುಕೊಟ್ಟಿಲ್ಲ.

ಯಶ್ ಮುಂದಿನ ಸಿನಿಮಾ ಕೆ.ವಿ. ಪ್ರೊಡಕ್ಷನ್ಸ್ ಜೊತೆಗೆ ಎನ್ನಲಾಗುತ್ತಿತ್ತು. ನರ್ತನ್ ನಿರ್ದೇಶನ ಸಿನಿಮಾ ಎಂಬ ಸುದ್ದಿಯಿತ್ತು. ಆದರೆ ಇದುವರೆಗೆ ಯಾವುದೂ ಕನ್ ಫರ್ಮ್ ಆಗಿಲ್ಲ.

ಇದೀಗ ಮಾರ್ಚ್ ತಿಂಗಳಲ್ಲಿ ಯಶ್ ಹೊಸ ಸಿನಿಮಾ ಘೋಷಣೆಯಾಗಬಹುದು ಎಂಬ ಮಾತು ಕೇಳಿಬರುತ್ತಿದೆ. ಈಗಲಾದರೂ ಯಶ್ ಫ್ಯಾನ್ಸ್ ನಿರೀಕ್ಷೆ ನಿಜವಾಗುತ್ತಾ ಎಂದು ಕಾದುನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊಬೈಲ್ ಸ್ವಿಚ್ ಆಫ್ ಮಾಡಲು ನಿರ್ಧರಿಸಿದ ರಿಷಬ್ ಶೆಟ್ಟಿ