Select Your Language

Notifications

webdunia
webdunia
webdunia
Friday, 4 April 2025
webdunia

ಸ್ಯಾಂಡಲ್ ವುಡ್ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ಇನ್ನಿಲ್ಲ

ಎಸ್.ಕೆ. ಭಗವಾನ್
ಬೆಂಗಳೂರು , ಸೋಮವಾರ, 20 ಫೆಬ್ರವರಿ 2023 (09:00 IST)
ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

ಅವರಿಗೆ 90 ವರ್ಷ ವಯಸ್ಸಾಗಿತ್ತು. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಭಗವಾನ್ ಇಂದು ಮುಂಜಾನೆ 6 ಗಂಟೆಗೆ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ಚಿತ್ರರಂಗ ಕಂಬನಿ ಮಿಡಿಯುತ್ತಿದೆ.

ರಂಗಭೂಮಿ ಮೂಲಕ ಬಣ್ಣದ ಲೋಕಕ್ಕೆ ಬಂದ ಭಗವಾನ್ ಬಳಿಕ ಕಣಗಾಲ್ ಪ್ರಭಾಕರ ಶಾಸ್ತ್ರಿ ಬಳಿ ಸಹಾಯಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಬಂದರು. ಸಂಧ್ಯಾರಾಗ ಅವರ ನಿರ್ದೇಶನದ ಮೊದಲ ಸಿನಿಮಾ. ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಕನ್ನಡದ ಮೇರು ನಟರಿಗೆ ನಿರ್ದೇಶನ ಮಾಡಿದ ಹೆಮ್ಮೆ ಅವರದ್ದು.  ದೊರೈ ರಾಜ್ ಜೊತೆ ಸೇರಿ ಅವರು ಅನೇಕ ಸಿನಿಮಾಗಳನ್ನು ನಿರ್ಮಿಸಿದ್ದು, ಇವರಿಬ್ಬರ ಜೋಡಿ ದೊರೈ-ಭಗವಾನ್ ಎಂದೇ ಖ್ಯಾತವಾಗಿತ್ತು. ದೊರೈ ಈಗಾಗಲೇ ಸಾವನ್ನಪ್ಪಿದ್ದು, ಇದೀಗ ಭಗವಾನ್ ಕೂಡಾ ಇಹಲೋಕದ ಪಯಣ ಮುಗಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ನಂದಮೂರಿ ತಾರಕರತ್ನ ಕೊನೆಯುಸಿರು