Select Your Language

Notifications

webdunia
webdunia
webdunia
webdunia

ಜೆ ಡಿ ಎಸ್ ಪಕ್ಷ ಸೇರ್ಪಡೆಯಾಗ್ತಿರುವ ನಾಯಕರು

ಜೆ ಡಿ ಎಸ್ ಪಕ್ಷ ಸೇರ್ಪಡೆಯಾಗ್ತಿರುವ ನಾಯಕರು
bangalore , ಭಾನುವಾರ, 19 ಫೆಬ್ರವರಿ 2023 (20:23 IST)
ವಿಧಾನಸಭಾ ಕ್ಷೇತ್ರದ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಟಿಕೆಟ್ಗಾಗಿ ಪಕ್ಷದ ಅಭ್ಯರ್ಥಿಗಳ ಮಧ್ಯೆ ಈಗಾಗಲೇ ಹಗ್ಗಜಗ್ಗಾಟ ಜೋರಾಗಿದ್ದು, ಕೆಲವರು ಟಿಕೆಟ್ ಸಿಗಲ್ಲ ಎಂದು ಕಾತರಿಯಾಗುತ್ತಿದ್ದಂತೆ ಒಂದು ಪಕ್ಷದಿಂದ ಮತ್ತೊಂದು ಪಕ್ಷದತ್ತೆ ವಲಸೆ ಹೋಗುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಆಡಳಿರೂಢ ಬಿಜೆಪಿ ಪಕ್ಷದ ಮಾಜಿ ಶಾಸಕರು, ನಾಯಕರುಗಳು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಸೇರ್ಪಡೆಯಾಗುತ್ತಿದ್ದಾರೆ.ಹುಬ್ಬಳ್ಳಿ-ಧಾರವಾಡ ಪೂರ್ವ ಮಾಜಿ ಶಾಸಕ ವೀರಭದ್ರಪ್ಙ ಹಾಲರವಿ ಅವರು ಇಂದು ಬಿಜೆಪಿ ತೊರೆದು ಜೆಡಿಎಸ್ಗೆ ಸೇರ್ಪಡೆಯಾದರು. ಬೆಂಗಳೂರಿನ ಜೆಪಿ ಭವನದಲ್ಲಿ ಹೆಚ್ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ವೀರಭದ್ರಪ್ಙ ಹಾಲರವಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ಹಾಸನ ಜಿಲ್ಲೆಯ ಟಿಕೆಟ್ ಗೊಂದಲಕ್ಕೆ ಸದ್ಯದಲ್ಲೇ ಸ್ಪಷ್ಟನೆ- ಹೆಚ್ ಡಿ ಕೆ