Select Your Language

Notifications

webdunia
webdunia
webdunia
webdunia

ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಕತೆ ಏನಾಯ್ತು?

ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಕತೆ ಏನಾಯ್ತು?
ಬೆಂಗಳೂರು , ಬುಧವಾರ, 1 ಮಾರ್ಚ್ 2023 (08:40 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ನಾಯಕರಾಗಿರುವ ಹೊಂಬಾಳೆ ಫಿಲಂಸ್ ನಿರ್ಮಾಣದ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಬಗ್ಗೆ ಸುದ್ದಿಯೇ ಇಲ್ಲವಲ್ಲಾ ಎನ್ನುವವರಿಗೆ ಅಪ್ ಡೇಟ್ ಒಂದು ಸಿಕ್ಕಿದೆ.

ಕಳೆದ ವರ್ಷ ಜಗ್ಗೇಶ್ ಹುಟ್ಟುಹಬ್ಬಕ್ಕೆ ಟೀಸರ್ ಬಿಡುಗಡೆ ಮಾಡಲಾಗಿತ್ತು. ಈ ಟೀಸರ್ ನಿಂದ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿತ್ತು. ಇದಾದ ಬಳಿಕ ಆಗಸ್ಟ್ ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ಘೋಷಣೆಯಾಗಿದ್ದರೂ ಬಳಿಕ ಮುಂದೂಡಿಕೆಯಾಗಿತ್ತು. ಅದಾದ ಬಳಿಕ ಸಿನಿಮಾ ಬಗ್ಗೆ ಸುದ್ದಿಯೇ ಇರಲಿಲ್ಲ.

ಇದೀಗ ಜಗ್ಗೇಶ್ ಸಿನಿಮಾ ಬಗ್ಗೆ ಅಪ್ ಡೇಟ್ ಕೊಟ್ಟಿದ್ದು, ಸಿನಿಮಾ ಈಗಷ್ಟೇ ನೋಡಿದ್ದೇನೆ. ಅದ್ಭುತವಾಗಿ ಮೂಡಿಬಂದಿದೆ. ನಿಮಗೂ ಇಷ್ಟವಾಗಬಹುದು. ಸದ್ಯದಲ್ಲೇ ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ ಎಂದಿದ್ದಾರೆ. ಈ ಸಿನಿಮಾಗೆ ರಾಜಕುಮಾರ ಖ್ಯಾತಿಯ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ರೆಸ್ ನಿಂದ ಮುಜುಗರಕ್ಕೊಳಗಾದ ರಶ್ಮಿಕಾ ಮಂದಣ್ಣ