Publish Date: Sun, 26 Feb 2023 (09:50 IST)
Updated Date: Sun, 26 Feb 2023 (09:51 IST)
ಬೆಂಗಳೂರು: ಈ ಬಾರಿಯ ಕರ್ನಾಟಕ ಚಲನಚಿತ್ರ ಕ್ರಿಕೆಟ್ ಲೀಗ್ ನಲ್ಲಿ ಡಾರ್ಲಿಂಗ್ ಕೃಷ್ಣ ನೇತೃತ್ವದ ಗಂಗಾ ವಾರಿಯರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಈ ತಂಡದಲ್ಲಿ ಕ್ರಿಕೆಟಿಗ ಸುರೇಶ್ ರೈನಾ ಆಡಿದ್ದರು. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ನಲ್ಲಿ ಮಿಂಚಿದ ರೈನಾ ಪಂದ್ಯ ಶ್ರೇಷ್ಠರಾದರು. ಎರಡು ದಿನಗಳಾಗಿ ನಡೆದ ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಭಾಗಿಯಾಗಿದ್ದವು.
ಪಂದ್ಯದ ಬಳಿಕ ಮಾತನಾಡಿರುವ ಸುರೇಶ್ ರೈನಾ ಕಿಚ್ಚ ಸುದೀಪ್ ಗೆ ಧನ್ಯವಾದ ಸಲ್ಲಿಸಿದ್ದಾರೆ. ಬಹಳ ದಿನಗಳ ನಂತರ ಚಿನ್ನಸ್ವಾಮಿ ಮೈದಾನದಲ್ಲಿ ಆಡಿದೆ. ಹಳೆಯ ನೆನಪುಗಳು ಮರುಕಳಿಸುವಂತೆ ಮಾಡಿತು. ಇಂತಹದ್ದೊಂದು ಅವಕಾಶ ಕೊಟ್ಟಿದ್ದಕ್ಕೆ ಕಿಚ್ಚ ಸುದೀಪ್ ಭಾಯಿ ಮತ್ತು ಕೆಸಿಸಿ ಆಯೋಜಕರಿಗೆ ಧನ್ಯವಾದಗಳು. ಮುಂದೆಯೂ ಆಡಲು ಬಯಸುವೆ ಎಂದಿದ್ದಾರೆ.