ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ ಕನ್ನಡ ಮೂಲದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಟ್ರೈಲರ್ ಇಂದು ಲಾಂಚ್ ಆಗಲಿದೆ.
ಈಗಾಗಲೇ ರವಿ ಬಸ್ರೂರು ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಎರಡು ಹಾಡುಗಳನ್ನು ಚಿತ್ರತಂಡ ರಿಲೀಸ್ ಮಾಡಿದ್ದು, ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕಬ್ಜ ಈ ವರ್ಷ ತೆರೆ ಕಾಣಲಿರುವ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಇದರ ಮೇಕಿಂಗ್ ಕೂಡಾ ಅಷ್ಟೇ ರಿಚ್ ಆಗಿ ಬಂದಿದೆ. ಹೀಗಾಗಿ ಇಂದು ಬಿಡುಗಡೆಯಾಗಲಿರುವ ಟ್ರೈಲರ್ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.
ಇಂದು ಸಂಜೆ 5.02 ಕ್ಕೆ ಟ್ರೈಲರ್ ಲಾಂಚ್ ಆಗುತ್ತಿದೆ. ಉಪೇಂದ್ರಗೆ ನಾಯಕಿಯಾಗಿ ಶ್ರಿಯಾ ಸರಣ್ ಅಭಿನಯಿಸಿದ್ದಾರೆ. ಇನ್ನು ಕಿಚ್ಚ ಸುದೀಪ್ ಜೊತೆಗೆ ಶಿವರಾಜ್ ಕುಮಾರ್ ಕೂಡಾ ವಿಶೇಷ ಪಾತ್ರವೊಂದನ್ನು ಮಾಡಿದ್ದಾರೆ.