Select Your Language

Notifications

webdunia
webdunia
webdunia
webdunia

ದಾಖಲೆ ನಿರ್ಮಿಸಿದ ಎನ್ ಟಿಆರ್ ಗೆ ಸಂಬಂಧಿಸಿದ ರಾಮರಾಜು ಫಾರ್ ಭೀಮ್ ಟೀಸರ್

ಹೈದರಾಬಾದ್
ಹೈದರಾಬಾದ್ : ರಾಜನಮೌಳಿ ಅವರ ನಿರ್ದೇಶನದ ಬಿಗ್ ಬಜೆಟ್ ಚಿತ್ರ ‘ಆರ್ ಆರ್ ಆರ್’ ನಲ್ಲಿ ಟಾಲಿವುಡ್ ನ ಸ್ಟಾರ್ ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್ ಟಿಆರ್ ನಟಿಸಿದ್ದಾರೆ.

ಈಗಾಗಲೇ ರಾಜಮೌಳಿ ಚಿತ್ರತಂಡವು ರಾಮ್ ಚರಣ್ ಅವರ ಜನ್ಮದಿನದ ವಿಶೇಷವಾಗಿ ಈಗಾಗಲೇ ವಿಡಿಯೋ ಬಿಡುಗಡೆ ಮಾಡಿತ್ತು. ಹಾಗೇ ಜೂನಿಯರ್ ಎನ್ ಟಿಆರ್ ಗೆ ಸಂಬಂಧಿಸಿದ ರಾಮರಾಜು ಫಾರ್ ಭೀಮ್ ಟೀಸರ್ ಬಿಡುಗಡೆಯಾಗಿದ್ದು, ಇದು ಯುಟ್ಯೂಬ್ ನಲ್ಲಿ ದಾಖಲೆ ನಿರ್ಮಿಸಿದೆ. ಈ ವಿಡಿಯೋ ಈಗಾಗಲೇ 39 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಮತ್ತು 11.6 ಲಕ್ಷ ಕಾಮೆಂಟ್ಸ್ ಗಳನ್ನು ಪಡೆದಿದೆ.

ಆ ಮೂಲಕ ಜೂನಿಯರ್ ಎನ್ ಟಿಆರ್ ಸರ್ ವಿಶ್ವದಾದ್ಯಂತ ಹೆಚ್ಚು ಕಾಮೆಂಟ್ ಪಡೆದ ವಿಡಿಯೋ ಎಂದು ದಾಖಲೆ ನಿರ್ಮಿಸಿದೆ. ಈ ಟೀಸರನ್ನು ಜೂನಿಯರ್ ಎನ್ ಟಿಆರ್ ಅಭಿಮಾನಿಗಳು ಟ್ವೀಟರ್ ನಲ್ಲಿ ‘ಅಜೇಯ ಭೀಮ್ ಟೀಸರ್’ ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ವೈರಲ್ ಆಗುತ್ತಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಸ್ಟರ್ ಚಿತ್ರ ಹಿಂದಿಗೆ ರಿಮೇಕ್?