Select Your Language

Notifications

webdunia
webdunia
webdunia
webdunia

ಖ್ಯಾತ ತೆಲುಗು ನಟ ನರ್ಸಿಂಗ್ ಯಾದವ್ ನಿಧನ

ಖ್ಯಾತ ತೆಲುಗು ನಟ ನರ್ಸಿಂಗ್ ಯಾದವ್ ನಿಧನ
ಹೈದರಾಬಾದ್ , ಶನಿವಾರ, 16 ಜನವರಿ 2021 (11:12 IST)
ಹೈದರಾಬಾದ್ : 300ಕ್ಕೂ ಹೆಚ್ಚು  ಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ಮಾಡುತ್ತಿದ್ದ ಜನಪ್ರಿಯ ತೆಲುಗು ನಟ ನರ್ಸಿಂಗ್ ಯಾದವ್ ಗುರುವಾರ ಹೈದರಾಬಾದ್ ನಲ್ಲಿ  ನಿಧನರಾಗಿದ್ದಾರೆ.

ಇವರಿಗೆ 57 ವರ್ಷ ವಯಸ್ಸಾಗಿದ್ದು, ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದರು. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಂಜೆ 7.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

1979ರಲ್ಲಿ ವಿಜಯ್ ನಿರ್ಮಲಾ ನಿರ್ದೇಶನದ ‘ಹೇಮಾ ಹೆಮೀಲು ‘ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಮತ್ತು ತೆಲುಗು ಚಿತ್ರಗಳಲ್ಲಿ 90ರ ದಶಕದ ಆರಂಭದವರೆಗೂ ಅತಿಥಿ ಪಾತ್ರಗಳ್ಲಲಿ ನಟಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಈಶ್ವರನ್ ಚಿತ್ರ ಬಿಡುಗಡೆಯಾದ ಮೊದಲ ದಿನ ಚೆನ್ನೈ ನಲ್ಲಿ ಗಳಿಸಿದ ಹಣವೆಷ್ಟು ಗೊತ್ತಾ?