ಹೈದರಾಬಾದ್ : ಚಿತ್ರರಂಗದಿಂದ ದೂರವಿದ್ದ ನಟ ಶ್ರುತಿ ಹಾಸನ್ ಅವರು ಟಾಲಿವುಡ್ ನ ಕ್ರ್ಯಾಕ್ ಚಿತ್ರದ ಮೂಲಕ ಮರು ಪ್ರವೇಶ ಮಾಡಿದ್ದಾರೆ.
ಈ ಚಿತ್ರಕ್ಕೆ ಸಕರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಹಾಗೇ ನಟಿ ಶ್ರುತಿ ಹಾಸನ್ ತಾನು ವಕೀಲ್ ಸಾಬ್ ಚಿತ್ರದ ನಾಯಕಿ ಎಂಬುದನ್ನು ನಿರಾಕರಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಈ ಚಿತ್ರದಲ್ಲಿ ನಾನು ಪೂರ್ಣ ಪ್ರಮಾಣದ ನಾಯಕಿ ಪಾತ್ರವನ್ನು ಮಾಡುತ್ತಿಲ್ಲ.
ನನ್ನ ಪಾತ್ರ ಅಲ್ಪಕಾಲಿಕವಾಗಿತ್ತು. ನಾನು ಅತಿಥಿ ಪಾತ್ರವನ್ನು ಮಾಡಿದ್ದೇನೆ. ಪಾತ್ರವು ಉತ್ತಮವಾಗಿತ್ತು ಮತ್ತು ಪವನ್ ಅವರ ಜೊತೆ ನಟಿಸಲು ಬಂದ ಅವಕಾಶವನ್ನು ಕಳೆದುಕೊಳ್ಳಲು ಇಷ್ಟವಿರದೆ ಈ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದೇನೆ ಎಂದು ಹೇಳಿದ್ದಾರೆ.