Select Your Language

Notifications

webdunia
webdunia
webdunia
webdunia

ಮಣಿರತ್ನಂ ‘ಪೊನ್ನಿಯಿಲ್ ಸೆಲ್ವನ್ ‘ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆಯೇ?

ಮಣಿರತ್ನಂ ‘ಪೊನ್ನಿಯಿಲ್ ಸೆಲ್ವನ್ ‘ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆಯೇ?
ಹೈದರಾಬಾದ್ , ಶುಕ್ರವಾರ, 15 ಜನವರಿ 2021 (09:46 IST)
ಹೈದರಾಬಾದ್ : ಮಣಿರತ್ನಂ ಅವರ ಮಹತ್ವಾಕಾಂಕ್ಷೆಯ ಯೋಜನೆ ‘ಪೊನ್ನಿಯಿಲ್ ಸೆಲ್ವನ್’ ಚಿತ್ರದ ಶೂಟಿಂಗ್ ಕೆಲವು ವಾರಗಳ ಹಿಂದೆ ಹೈದರಾಬಾದ್ ನಲ್ಲಿ ಪುನಾರಾರಂಭಗೊಂಡಿದೆ. ಸದ್ಯ ಶೂಟಿಂಗ್ ಭರದಿಂದ ಸಾಗಿದೆ.

ಈ ಚಿತ್ರದಲ್ಲಿ ಭಾರತೀಯ ಚಿತ್ರೋದ್ಯಮದ  ಅತ್ಯುತ್ತಮ ನಟರು ಕೆಲಸ ಮಾಡಿದ್ದಾರೆ. ಕಾರ್ತಿ, ಜಯಂರವಿ, ತ್ರಿಶಾ ಈ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.  ಎ.ಆರ್.ರೆಹಮಾನ್ ಸಂಗೀತ ನೀಡಿದ್ದಾರೆ. ಇದರ ಮುಂದಿನ ವೇಳಾಪಟ್ಟಿಯಲ್ಲಿ ವಿಕ್ರಮ್, ಐಶ್ವರ್ಯ ರೈ ಬಚ್ಚನ್, ಮುಂತಾದವರು ಸೇರಲಿದ್ದಾರೆ.

ಆದರೆ ಇತ್ತೀಚಿನ ಮಾಹಿತಿ ಪ್ರಕಾರ  ಮಣಿರತ್ನಂ ಅವರು ಡಿಜಿಟಲ್ ದೈತ್ಯ ನೆಟ್ ಫ್ಲಿಕ್ಸ್ ನಿಂದ ಭಾರೀ ಕೊಡುಗೆಯನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು, ಚಿತ್ರದ  ಸ್ಟ್ರೀಮಿಂಗ್ ಹಕ್ಕುಗಳಿಗೆ ಕಂಪೆನಿಯು ದೊಡ್ಡ ಮೊತ್ತ ನೀಡಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಭಾಸ್ ಸಿನಿಮಾ ಮುಹೂರ್ತಕ್ಕೆ ರಾಕಿ ಭಾಯ್ ಯಶ್ ಚೀಫ್ ಗೆಸ್ಟ್