ಚೆನ್ನೈ : ಸುಶೇಂತಿರನ್ ನಿರ್ದೇಶನದ ಮತ್ತು ಸಿಂಬು ಅಭಿನಯದ ಈಶ್ವರನ್ ಚಿತ್ರ ಜನವರಿ 14ರಂದು ಬಿಡುಗಡೆಯಾಗಿದೆ. ಇದು ಜನವರಿ 13ರಂದು ಬಿಡುಗಡೆಯಾದ ಮಾಸ್ಟರ್ ಚಿತ್ರಕ್ಕೆ ಪ್ರತಿಸ್ಪರ್ಧಿಯಾಗಿದೆ.
ಸಿಂಬು ಅಭಿಮಾನಿಗಳು ಚಿತ್ರವನ್ನು ಸ್ವಾಗತಿಸಿದ್ದರು. ಈ ಚಿತ್ರಕ್ಕೆ ಜನರು ಹಾಗೂ ಸೆಲೆಬ್ರಿಟಿಗಳು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಆದರೂ ಈಶ್ವರನ್ ಚಿತ್ರ ಮಿಶ್ರ ವಿಮರ್ಶೆಗಳನ್ನು ಪಡೆದಿದೆ. ಮತ್ತು ಚಿತ್ರ ಬಿಡುಗಡೆಯಾದ ಮೊದಲ ದಿನ ಚೆನ್ನೈ ನಲ್ಲಿ 20ಲಕ್ಷ ರೂ ಹಣ ಸಂಗ್ರಹಿಸಿದೆ ಎನ್ನಲಾಗಿದೆ.