Daily Horoscope

Select Your Language

Notifications

webdunia
webdunia
webdunia
webdunia

ರಿಲೇಶನ್ ಶಿಪ್ ನಲ್ಲಿರುವುದನ್ನು ಒಪ್ಪಿಕೊಂಡ ನಟ ರಾಜ್ ಬಿ ಶೆಟ್ಟಿ

ರಾಜ್ ಬಿ ಶೆಟ್ಟಿ
ಬೆಂಗಳೂರು: ಒಂದು ಮೊಟ್ಟೆಯ ಕತೆ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ರಾಜ್ ಬಿ ಶೆಟ್ಟಿ ತಮ್ಮದೇ ವಿಶಿಷ್ಟ ಸಿನಿಮಾಗಳ ಮೂಲಕ ಜನ ಮನ ಗೆದ್ದವರು.

ರಾಜ್ ಶೆಟ್ಟಿ ಎಲ್ಲೇ ಹೋದರೂ ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಬರುತ್ತಲೇ ಇರುತ್ತದೆ. ಈ ಬಾರಿ ಅವರು ಜೀ ಕನ್ನಡ ವಾಹಿನಿಯ ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ತಮ್ಮ ಪ್ರೀತಿ, ಬ್ರೇಕಪ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಓದುತ್ತಿದ್ದಾಗ ತಮಗೆ ಪ್ರೀತಿಯಾಗಿತ್ತು. ಆರು ವರ್ಷಗಳ ಬಳಿಕ ಬ್ರೇಕಪ್ ಆಗಿತ್ತು ಎಂಬುದನ್ನು ರಾಜ್ ಶೆಟ್ಟಿ ಹೇಳಿದ್ದಾರೆ. ಇನ್ನು, ಈಗ ಮತ್ತೆ ಪ್ರೀತಿಯಾಗಿರುವುದಾಗಿಯೂ ಹೇಳಿದ್ದಾರೆ. ಸದ್ಯಕ್ಕೆ ರಾಜ್ ಬಿ ಶೆಟ್ಟಿ ಒಂದು ರಿಲೇಶನ್ ಶಿಪ್ ನಲ್ಲಿದ್ದಾರಂತೆ. ‘ಈಗ ಒಂದು ರಿಲೇಶನ್ ಶಿಪ್ ನಲ್ಲಿದ್ದೇನೆ. ನಂದೇನೂ ರೂಲ್ಸ್ ಇಲ್ಲ. ಅವಳದ್ದೂ ಇಲ್ಲ. ನಾವಿಬ್ಬರೂ ಖುಷಿಯಾಗಿದ್ದೇವೆ. ನೀನು ಬದುಕು ಕಲಿ. ನಾನೂ ಬದುಕು ಕಲಿಯುತ್ತೇನೆ ಎಂಬ ಮನಸ್ಥಿತಿ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎದ್ದೇಳ್ರೋ..! ಪುಷ್ಪ 2 ಟೀಂಗೆ ನೆಟ್ಟಿಗರಿಂದ ಕಪಾಳ ಮೋಕ್ಷ