Select Your Language

Notifications

webdunia
webdunia
webdunia
webdunia

ಮುದ್ದಿನ ನಾಯಿ ಜೊತೆ ಬರ್ತ್ ಡೇ ಆಚರಿಸಿಕೊಂಡ ನಟಿ ಮೇಘಾ ಶೆಟ್ಟಿ

ಮೇಘಾ ಶೆಟ್ಟಿ
Photo Courtesy: Twitter
ಬೆಂಗಳೂರು: ಜೊತೆ ಜೊತೆಯಲಿ ಧಾರವಾಹಿ ಮೂಲಕ ಸೆನ್ಸೇಷನ್ ಸೃಷ್ಟಿಸಿದ್ದ ನಟಿ ಮೇಘಾ ಶೆಟ್ಟಿಗೆ ಇಂದು ಜನ್ಮದಿನದ ಸಂಭ್ರಮ.

ಮೇಘಾ ತಮ್ಮ ಸಿನಿ ಸ್ನೇಹಿತರ ಜೊತೆ ಬರ್ತ್ ಡೇ ಪಾರ್ಟಿ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಕಟೌಟ್‍ ಕೇಕ್ ತಂದು ಸಂಭ್ರಮಾಚರಣೆ ಮಾಡಿದ್ದಾರೆ. ಇನ್ನು, ಹುಟ್ಟುಹಬ್ಬದ ದಿನ ತಮ್ಮ ನೆಚ್ಚಿನ ನಾಯಿಯೊಂದಿಗೆ ಮೇಘಾ ಹುಟ್ಟುಹಬ್ಬ ಆಚರಿಸಿದ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮೇಘಾ ಈಗ ಕಿರುತೆರೆ ಮಾತ್ರವಲ್ಲ, ಸ್ಯಾಂಡಲ್ ವುಡ್ ನಲ್ಲೂ ಬೇಡಿಕೆಯ ನಟಿ. ಅವರಿಗೆ ಅವರದ್ದೇ ಆದ ಅಭಿಮಾನಿ ಬಳಗವಿದೆ. ಕೈವ ಮೇಘಾ ಅಭಿನಯಿಸುತ್ತಿರುವ ಮುಂದಿನ ಸಿನಿಮಾ. ಈಗಾಗಲೇ ದಿಲ್ ಪಸಂದ್, ತ್ರಿಬಲ್ ರೈಡಿಂಗ್ ಬಿಡುಗಡೆಯಾಗಿ ಸ್ಯಾಂಡಲ್ ವುಡ್ ನ ಭರವಸೆ ನಟಿ ಎನಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ ಬಿ ಶೆಟ್ಟಿ ‘ಟೋಬಿ’ ಟ್ರೈಲರ್ ಇಂದು ಲಾಂಚ್: ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಸಾಥ್