ಬೆಂಗಳೂರು: ರಾಜ್ ಬಿ ಶೆಟ್ಟಿಯವರ ಟೋಬಿ ಸಿನಿಮಾ ಟ್ರೈಲರ್ ಲಾಂಚ್ ವೇಳೆ ಮಾತನಾಡಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಾವ್ಯಾಕೆ ಉತ್ತರ ಕರ್ನಾಟಕದ ಕತೆಗಳನ್ನು ತೆರೆ ಮೇಲೆ ತರೋದಿಲ್ಲ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ ರಂಗದಲ್ಲಿ ಇಂದು ರಾಜ್, ರಿಷಬ್, ರಕ್ಷಿತ್ ಎಂಬ ತ್ರಿಬಲ್ ಆರ್ ನದ್ದೇ ಹವಾ. ಇವರ ಸಿನಿಮಾಗಳು ಕರಾವಳಿ ಭಾಗಕ್ಕೆ ಸಂಬಂಧಿಸಿದ ಕತೆ, ಅಲ್ಲಿನ ಭಾಷೆಯನ್ನೇ ಹೊಂದಿರುತ್ತದೆ. ಉತ್ತರ ಕರ್ನಾಟಕದ ಭಾಗದ ಸಂಸ್ಕೃತಿಯನ್ನು ಬಿಂಬಿಸುವ ಸಿನಿಮಾಗಳನ್ನು ಇವರು ಮಾಡಲ್ಲ ಎನ್ನುವ ಅಪವಾದವಿದೆ.
ಈ ಬಗ್ಗೆ ರಕ್ಷಿತ್ ನಿನ್ನೆ ಸ್ಪಷ್ಟನೆ ಕೊಟ್ಟಿದ್ದಾರೆ. ಉತ್ತರ ಕರ್ನಾಟಕದ ಮಂದಿ ಸಿನಿಮಾಗೆ ಬರಬೇಕು. ನಮ್ಮಲ್ಲಿ ನಟರು, ನಿರ್ದೇಶಕರು ಹೆಚ್ಚಾಗಬೇಕು. ಯಾಕೆಂದರೆ ಇಂಡಸ್ಟ್ರಿ ಬೆಳೆದರೆ ಮಾತ್ರ ನಾವು ಬೆಳೆಯಲು ಸಾಧ್ಯ. ನಮಗೆ ಈ ಇಂಡಸ್ಟ್ರಿಯೇ ಪ್ಲ್ಯಾಟ್ ಫಾರಂ. ನಾವು ಉತ್ತರ ಕರ್ನಾಟಕದ ಶೈಲಿಯ ಸಿನಿಮಾಗಳನ್ನು ಮಾಡಕ್ಕಾಗಲ್ಲ. ಯಾಕೆಂದರೆ ಅಲ್ಲಿನ ಶೈಲಿಯ ಸಿನಿಮಾಗಳನ್ನು ಮಾಡಬೇಕೆಂದರೆ ಅಲ್ಲಿ ಕೆಲವು ಸಮಯ ಜೀವನ ಮಾಡಬೇಕು. ಅಲ್ಲಿಯ ಸಂಸ್ಕೃತಿ, ಜೀವನ ಶೈಲಿಯನ್ನು ತಿಳಿದುಕೊಳ್ಳಬೇಕು. ಇಲ್ಲದೇ ಹೋದರೆ ಅದು ಸಾಧ್ಯವಿಲ್ಲ. ಅದಕ್ಕೆ ಉತ್ತರ ಕರ್ನಾಟಕದ ಪ್ರತಿಭೆಗಳು ಸಿನಿಮಾ ರಂಗಕ್ಕೆ ಬರಲಿ. ಆಗ ಅಂತಹ ಸಿನಿಮಾಗಳು ಬರಬಹುದು ಎಂದಿದ್ದಾರೆ.