Publish Date: Sun, 30 Jul 2023 (16:50 IST)
Updated Date: Sun, 30 Jul 2023 (16:52 IST)
ಬೆಂಗಳೂರು: ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಟೋಬಿ ಸಿನಿಮಾ ಈಗ ಎಲ್ಲರ ಕುತೂಹಲ ಕೆರಳಿಸಿದೆ. ಈ ಸಿನಿಮಾದ ಟ್ರೈಲರ್ ಲಾಂಚ್ ಗೆ ಚಿತ್ರತಂಡ ಮುಹೂರ್ತ ಫಿಕ್ಸ್ ಮಾಡಿದೆ.
ಆಗಸ್ಟ್ 25 ಕ್ಕೆ ಟೋಬಿ ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ರಾಜ್ ಬಿ ಶೆಟ್ಟಿ ಚಿತ್ರದ ಫಸ್ಟ್ ಲುಕ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಇದೀಗ ಟ್ರೈಲರ್ ಬಿಡುಗಡೆ ಮಾಡಲು ರೆಡಿಯಾಗಿದ್ದಾರೆ. ಆಗಸ್ಟ್ 4 ರಂದು ಸಂಜೆ 4.05 ಕ್ಕೆ ಟೋಬಿ ಟ್ರೈಲರ್ ಲಾಂಚ್ ಆಗಲಿದೆ. ಇದೊಂದು ಮಾಸ್ ಸಿನಿಮಾವಾಗಿದ್ದು ರಾಜ್ ಬಿ ಶೆಟ್ಟಿ ಮೂಗು ಚುಚ್ಚಿಸಿಕೊಂಡು ತಮ್ಮ ಪಾತ್ರಕ್ಕಾಗಿ ವಿಶೇಷ ಲುಕ್ ಮಾಡಿಸಿಕೊಂಡಿದ್ದರು.