Publish Date: Thu, 27 Jul 2023 (08:30 IST)
Updated Date: Thu, 27 Jul 2023 (08:54 IST)
ಬೆಂಗಳೂರು: ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಮಾಸ್ ಸಿನಿಮಾಗಳದ್ದೇ ಕಾರುಬಾರು. ಫ್ಯಾಮಿಲಿ ಸಿನಿಮಾಗಳು ಥಿಯೇಟರ್ ಗೆ ಬರುವುದೇ ಅಪರೂಪವಾಗಿದೆ.
ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಬ್ಯಾನರ್ ಆಚಾರ್ ಆಂಡ್ ಕೋ. ಎನ್ನುವ ವಿಶಿಷ್ಟ ಫ್ಯಾಮಿಲಿ ಎಂಟರ್ ಟೈನರ್ ಸಿನಿಮಾ ಈಗ ಬಿಡುಗಡೆಗೆ ಸಿದ್ಧವಾಗಿದೆ. ನಾಳೆ ಸಿನಿಮಾ ಥಿಯೇಟರ್ ಗೆ ಬರಲಿದೆ.
80 ರ ದಶಕದ ಕತೆ ಹೊಂದಿರುವ ಫ್ಯಾಮಿಲಿ ಎಂಟರ್ ಟೈನರ್. ಈಗಾಗಲೇ ಇದರ ಎರಡು ಹಾಡುಗಳು ಸೂಪರ್ ಹಿಟ್ ಆಗಿವೆ. ಸೆಲೆಬ್ರಿಟಿಗಳು ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. ಈಗ ಫ್ಯಾಮಿಲಿ ಪ್ರೇಕ್ಷಕರನ್ನು ಮತ್ತೆ ಥಿಯೇಟರ್ ಗೆ ಕರೆತರುವ ಸಾಮರ್ಥ್ಯವಿರುವ ಸಿನಿಮಾ ಇದು. ಮಹಿಳಾ ನಿರ್ದೇಶಕಿ, ಹೊಸ ತಂತ್ರಜ್ಞರು, ಕಲಾವಿದರನ್ನು ಒಳಗೊಂಡ ಸಿನಿಮಾವಿದು. ಕಳೆದ ವಾರ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಎಂಬ ಹೊಸಬರ ಸಿನಿಮಾ ಸಕ್ಸಸ್ ಆಗಿತ್ತು. ಈ ವಾರ ಆಚಾರ್ ಆಂಡ್ ಕೋ. ಸಕ್ಸಸಸ್ ಆಗಬಹುದು ಎಂಬ ನಿರೀಕ್ಷೆಯಲ್ಲಿ ಚಿತ್ರತಂಡವಿದೆ.