Select Your Language

Notifications

webdunia
webdunia
webdunia
webdunia

ಹೊಸಬರ ಸಿನಿಮಾ ದಾಖಲೆ ಗಳಿಕೆ ಪಟ್ಟಿಗೆ ಸೇರುತ್ತಾ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ?

ಹೊಸಬರ ಸಿನಿಮಾ ದಾಖಲೆ ಗಳಿಕೆ ಪಟ್ಟಿಗೆ ಸೇರುತ್ತಾ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ?
ಬೆಂಗಳೂರು , ಮಂಗಳವಾರ, 25 ಜುಲೈ 2023 (09:00 IST)
ಬೆಂಗಳೂರು: ಕತೆ ಚೆನ್ನಾಗಿದ್ದರೆ ಹೊಸಬರ ಸಿನಿಮಾಗಳೂ ಗೆಲ್ಲುತ್ತವೆ ಎಂಬುದು ಸ್ಯಾಂಡಲ್ ವುಡ್ ನಲ್ಲಿ ಅನೇಕ ಬಾರಿ ಪ್ರೂವ್ ಆಗಿದೆ. ಆ ಸಾಲಿಗೆ ಈಗ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಕೂಡಾ ಸೇರ್ಪಡೆಯಾಗುತ್ತಿದೆ.

ಈ ಸಿನಿಮಾ ಬಿಡುಗಡೆಗೂ ಮೊದಲೇ ಸದ್ದು ಮಾಡಿತ್ತು. ಪ್ರಮುಖ ಪಾತ್ರದಲ್ಲಿ ಯಾವುದೇ ಸ್ಟಾರ್ ನಟರಿಲ್ಲದಿದ್ದರೂ ಹೊಸ ತಂಡ ಮೊದಲ ಪ್ರಯತ್ನಲ್ಲೇ ಗೆದ್ದಿದೆ. ಯೂಥ್ ಫುಲ್ ಸ್ಟೋರಿ ಇಟ್ಟುಕೊಂಡು ಪ್ರೇಕ್ಷಕರಿಗೆ ಭರಪೂರ ಮನರಂಜನೆ ಒದಗಿಸಿದೆ.

ಇದೀಗ ಗಳಿಕೆ ವಿಚಾರದಲ್ಲೂ ಭಾರೀ ಮುಂದಿದೆ. ಮೊದಲ ದಿನವೇ ಅಂದಾಜು 1 ಕೋಟಿ ಗಳಿಕೆ ಮಾಡಿತ್ತು ಎನ್ನಲಾಗಿದೆ. ಸ್ಯಾಂಡಲ್ ವುಡ್ ನಲ್ಲಿ ಈ ರೀತಿ ಹೊಸಬರ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಕೆಲವು ಸಿನಿಮಾಗಳು ಭರ್ಜರಿ ಕಲಕ್ಷನ್ ಮಾಡಿದ್ದವು. ಅವುಗಳ ಪೈಕಿ  ರಂಗಿತರಂಗ 30 ಕೋಟಿ ರೂ. ದುನಿಯಾ 25 ಕೋಟಿ, ಎ 20 ಕೋಟಿ ರೂ., ಅಪ್ಪು 15 ಕೋಟಿ ರೂ. ಬಾಚಿಕೊಂಡಿತ್ತು. ಈಗ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಆ ಸಾಲಿಗೆ ಸೇರುವ ಲಕ್ಷಣವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರಮಪಡದೇ ಹೀಗೆಲ್ಲಾ ಮಾಡಲು ಸಾಧ್ಯವಿಲ್ಲ! ಸಿಕ್ಸ್ ಪ್ಯಾಕ್ ಪ್ರದರ್ಶಿಸಿದ ಗೀತಾ ಹೀರೋ ಧನುಷ್