Publish Date: Sun, 23 Jul 2023 (09:00 IST)
Updated Date: Sun, 23 Jul 2023 (09:18 IST)
ಬೆಂಗಳೂರು: ಹೊಸಬರ ಸಿನಿಮಾಗಳೆಂದರೆ ಕೆಲವರು ನೋಡಲು ಹಿಂದೆ ಮುಂದೆ ನೋಡುತ್ತಾರೆ. ಆದರೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಅದನ್ನು ಮೀರಿ ಗೆಲುವು ಸಾಧಿಸಿದೆ.
ಪಕ್ಕಾ ಕಾಲೇಜು ಹುಡುಗರಿಗೆ ಇಷ್ಟವಾಗುವ ಸ್ಟೋರಿ ಲೈನ್ ಜೊತೆಗೆ ಇಡೀ ಸಿನಿಮಾದಲ್ಲಿ ಮನರಂಜನೆಯಿದೆ. ಈ ಕಾರಣಕ್ಕೆ ಪ್ರೇಕ್ಷಕರು ಥಿಯೇಟರ್ ಗೆ ಲಗ್ಗೆಯಿಡುತ್ತಿದ್ದಾರೆ. ಮೊದಲ ದಿನವೇ ಚಿತ್ರದ ಕಲೆಕ್ಷನ್ ಒಂದು ಕೋಟಿ ಸನಿಹ ಬಂದಿದೆ.
ನಿನ್ನೆ, ಇಂದು ವೀಕೆಂಡ್ ಆಗಿದ್ದು, ಮತ್ತಷ್ಟು ಜನ ಥಿಯೇಟರ್ ಗೆ ಬರುತ್ತಿದ್ದಾರೆ. ಹೆಚ್ಚಿನ ಥಿಯೇಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನವಾಗುತ್ತಿರುವುದು ಹೊಸಬರಿಗೆ ಸಿಕ್ಕ ಅದ್ಭುತ ಯಶಸ್ಸಾಗಿದೆ.