ಬೆಂಗಳೂರು: ಹಾಸ್ಟೆಲ್ ಹುಡುಗರು ಸಿನಿಮಾದ ಟ್ರೈಲರ್ ನಲ್ಲಿ ಅನುಮತಿಯಿಲ್ಲದೇ ತಮ್ಮ ದೃಶ್ಯಗಳನ್ನು ಬಳಸಲಾಗಿದೆ ಎಂದು ನಟಿ ರಮ್ಯಾ ಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ಬಿಡುಗಡೆಗೆ ಕೊನೆಯ ಕ್ಷಣದಲ್ಲಿ ನ್ಯಾಯಾಲಯ ತಡೆ ಅರ್ಜಿ ತೆರವುಗೊಳಿಸಿ ಚಿತ್ರತಂಡ ನಿಟ್ಟುಸಿರುವ ಬಿಡುವಂತೆ ಮಾಡಿತ್ತು.
ಈ ವಿವಾದದ ಬಗ್ಗೆ ಇದೀಗ ಸ್ಯಾಂಡಲ್ ವುಡ್ ನಲ್ಲಿ ಸದ್ಯಕ್ಕೆ ಹಿರಿಯಣ್ಣನಂತಿರುವ ನಟ ಶಿವರಾಜ್ ಕುಮಾರ್ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ್ದಾರೆ.
ಸಿನಿಮಾ ರಿಸಲ್ಟ್ ಏನು ಬಂದಿದೆ ಎನ್ನುವುದು ಮುಖ್ಯ. ಒಳ್ಳೆಯ ಮನಸ್ಸಿನಿಂದ ಸಿನಿಮಾ ಮಾಡಿದರೆ ಯಾವ ಅಡೆತಡೆಯೂ ಇರಲ್ಲ. ಸತ್ಯ ಇದ್ದಲ್ಲಿ ಜಯ ಇದೆ. ಒಟ್ಟಿನಲ್ಲಿ ನಮ್ಮ ಇಂಡಸ್ಟ್ರಿ ಬೆಳೆಯಬೇಕು ಎಂದಿದ್ದಾರೆ.