ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯವರ ಪರಂವಾ ಸ್ಟುಡಿಯೋಸ್ ಅರ್ಪಿಸುತ್ತಿರುವ ಹೊಸಬರ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಇಂದು ಥಿಯೇಟರ್ ನಲ್ಲಿ ರಿಲೀಸ್ ಆಗುತ್ತಿದೆ.
ಈ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಇದನ್ನು ನೋಡಿದರೆ ಈ ಹಿಂದೆ ರಕ್ಷಿತ್ ಶೆಟ್ಟಿ-ರಿಷಬ್ ಶೆಟ್ಟಿ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ ಕಿರಿಕ್ ಪಾರ್ಟಿ ಸಿನಿಮಾ ನೆನಪಾಗುತ್ತದೆ. ಹೊಸ ಹುಡುಗರ ಜೊತೆ ರಮ್ಯಾ, ರಿಷಬ್ ಶೆಟ್ಟಿ, ದಿಗಂತ್ ಮಂಚಾಲೆ ಅತಿಥಿ ಪಾತ್ರದಲ್ಲಿ ಬಂದು ಹೋಗುತ್ತಾರೆ.
ಈ ಸಿನಿಮಾ ಕಾಲೇಜು ಹುಡುಗರಿಗೆ ಇಷ್ಟವಾಗುವ ಕತೆ ಹೊಂದಿದೆ. ಹೀಗಾಗಿ ಕಿರಿಕ್ ಪಾರ್ಟಿಯಂತೆ ಇದೂ ಕೂಡಾ ಹಿಟ್ ಆಗಬಹುದು ಎಂಬ ನಿರೀಕ್ಷೆಯಲ್ಲಿ ಚಿತ್ರತಂಡವಿದೆ.