ಬೆಂಗಳೂರು: ಪರಂವಾ ಸ್ಟುಡಿಯೋಸ್ ನಿರ್ಮಾಣದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿ ಭಾರೀ ಸದ್ದು ಮಾಡುತ್ತಿದೆ.
ಈ ಸಿನಿಮಾ ಜುಲೈ 21 ಕ್ಕೆ ರಿಲೀಸ್ ಆಗುತ್ತಿದೆ. ಇದರ ನಡುವೆ ಚಿತ್ರತಂಡಕ್ಕೆ ಹೊಸ ತಲೆನೋವು ಎದುರಾಗಿದೆ. ಈ ಸಿನಿಮಾ ತಂಡಕ್ಕೆ ನಟಿ ರಮ್ಯಾ ಲೀಗಲ್ ನೋಟಿಸ್ ಕಳುಹಿಸಿದ್ದು ಅನುಮತಿ ಇಲ್ಲದೇ ತಮ್ಮ ದೃಶ್ಯಗಳನ್ನು ಬಳಸಲಾಗಿದೆ. ಒಂದು ಕೋಟಿ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈಗಾಗಲೇ ಪ್ರೋಮೋ ಶೂಟ್ ನಲ್ಲಿ ರಮ್ಯಾ ಭಾಗಿಯಾಗಿದ್ದರು. ಅದನ್ನೇ ಚಿತ್ರತಂಡ ಟ್ರೈಲರ್ ನಲ್ಲಿ ಹಾಕಿಕೊಂಡಿತ್ತು. ಆದರೆ ಈಗ ತಮ್ಮ ದೃಶ್ಯದ ತುಣುಕನ್ನು ಹಾಕಿಕೊಂಡಿದ್ದನ್ನು ರಮ್ಯಾ ಆಕ್ಷೇಪಿಸಿದ್ದಾರೆ. ಇದು ಚಿತ್ರತಂಡ ಸಂಕಷ್ಟಕ್ಕೀಡಾಗುವಂತೆ ಮಾಡಿದೆ. ಆದರೆ ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಇದು ಪ್ರಚಾರದ ಗಿಮಿಕ್ ಇರಬೇಕು ಎಂದಿದ್ದಾರೆ.