Publish Date: Wed, 19 Jul 2023 (16:04 IST)
Updated Date: Wed, 19 Jul 2023 (16:11 IST)
ಬೆಂಗಳೂರು: ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಎಂಎನ್ ಕುಮಾರ್ ನಡುವೆ ಎದ್ದಿರುವ ವಿವಾದ ಬಗೆಹರಿಸಲು ಕ್ರೇಜಿಸ್ಟಾರ್ ರವಿಚಂದ್ರನ್ ಮಧ‍್ಯಸ್ಥಿಕೆ ವಹಿಸಿದ್ದಾರೆ.
ಇಂದು ಎಂಎನ್ ಕುಮಾರ್ ಕೆಲವು ದಾಖಲೆ ಪತ್ರಗಳೊಂದಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ನಿವಾಸಕ್ಕೆ ಭೇಟಿ ನೀಡಿ ತಮ್ಮ ಪಾಲಿನ ವಿಚಾರಗಳನ್ನು ಅವರ ಎದುರು ಹೇಳಿಕೊಂಡಿದ್ದಾರೆ.
ಬಳಿಕ ಮಾಧ‍್ಯಮಗಳ ಮುಂದೆ ಮಾತನಾಡಿರುವ ರವಿಚಂದ್ರನ್, ಎಲ್ಲಾ ಒಳ್ಳೆ ರೀತಿಯಲ್ಲಿ ಮುಗಿಯಲಿ ಎಂಬುದು ನನ್ನ ಆಶಯ. ನಾನು ಈಗ ಕುಮಾರ್ ಕತೆ ಕೇಳಿದ್ದೇನೆ. ಅವರದ್ದು ಸುಮಾರು 20 ವರ್ಷಗಳ ವಿಚಾರವಿದೆ. ಅವರ ವರ್ಷನ್ ಅವರು ಹೇಳಿದ್ದಾರೆ. ಇನ್ನು, ಸುದೀಪ್ ವಿಚಾರವನ್ನು ಕೇಳುತ್ತೇನೆ. ಒಂದೋ ನಾನೇ ಸುದೀಪ್ ಭೇಟಿಯಾಗುತ್ತೇನೆ. ಇಲ್ಲಾ ಸುದೀಪ್ ನ್ನು ಇಲ್ಲಿಗೆ ಕರೆಸುತ್ತೇನೆ. ಇಬ್ಬರೂ ನನ್ನ ಮಾತಿಗೆ ಒಪ್ಪುವುದಾದರೆ ಮಾತ್ರ ನಾನು ಈ ವಿಚಾರದಲ್ಲಿ ಮಧ‍್ಯಸ್ಥಿಕೆ ವಹಿಸುತ್ತೇನೆ. ಇಲ್ಲದೇ ಹೋದರೆ ಈ ವಿಚಾರದಲ್ಲಿ ನಾನು ತಲೆ ಹಾಕಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಹೀಗಾಗಿ ಈಗ ಕುಮಾರ್ ಅವರ ವಾದ ಕೇಳಿರುವ ರವಿಚಂದ್ರನ್ ಮುಂದೆ ಸುದೀಪ್ ರನ್ನು ಭೇಟಿಯಾಗುವ ಸಾಧ‍್ಯತೆಯಿದೆ.