ಬೆಂಗಳೂರು: ಜೊತೆ ಜೊತೆಯಲಿ ಧಾರವಾಹಿಯಿಂದ ಸೆನ್ಸೇಷನ್ ಸೃಷ್ಟಿಸಿದ್ದ ನಟ ಅನಿರುದ್ಧ್ ಜತ್ಕಾರ್ ಈ ಧಾರವಾಹಿಯಿಂದ ವಿವಾದಾತ್ಮಕವಾಗಿ ಹೊರಬಂದ ಮೇಲೆ ಸೂರ್ಯವಂಶ ಎನ್ನುವ ಧಾರವಾಹಿಯಲ್ಲಿ ಅಭಿನಯಿಸಬೇಕಿತ್ತು.
ಉದಯ ವಾಹಿನಿಗಾಗಿ ಸೂರ್ಯವಂಶ ಧಾರವಾಹಿ ನಿರ್ಮಾಣವಾಗುವುದು ಪಕ್ಕಾ ಆಗಿತ್ತು. ಎಸ್. ನಾರಾಯಣ್ ಸಾರಥ್ಯದಲ್ಲಿ ಕೆಲವು ಎಪಿಸೋಡ್ ಗಳ ಶೂಟ್ ಕೂಡಾ ನಡೆದಿತ್ತು. ಆದರೆ ಕಾರಣಾಂತರಗಳಿಂದ ಪ್ರಸಾರ ಆರಂಭಕ್ಕೆ ಮುನ್ನವೇ ಧಾರವಾಹಿ ಅರ್ಧಕ್ಕೇ ನಿಂತಿತು.
ಇದಕ್ಕೆ ಕಾರಣವೇನೆಂದು ನಟ ಅನಿರುದ್ಧ್ ಹೇಳಿದ್ದಾರೆ. ಚಾನೆಲ್ ಮತ್ತು ನಿರ್ದೇಶಕರ ನಡುವಿನ ಸಮನ್ವಯತೆಯ ಕೊರತೆಯಿಂದ ಧಾರವಾಹಿ ನಿಂತು ಹೋಗಿತ್ತು ಎಂದಿದ್ದಾರೆ. ಈ ಧಾರವಾಹಿ ಬಗ್ಗೆ ಜನರಲ್ಲಿ ತುಂಬಾ ನಿರೀಕ್ಷೆಯಿತ್ತು. ಆದರೆ ಕೆಲವು ಅಭಿಪ್ರಾಯ ಬೇಧಗಳಿಂದ ಈ ರೀತಿ ಆಗಿದೆ. ಇದು ಸಹಜ. ಕೆಲವೊಮ್ಮೆ ಹೀಗೆ ಆಗುತ್ತದೆ ಎಂದಿದ್ದಾರೆ. ಇದೀಗ ಅನಿರುದ್ಧ್ ಹೊಸ ಪ್ರಾಜೆಕ್ಟ್ ಬಗ್ಗೆ ಅಪ್ ಡೇಟ್ ಕೊಡಲು ಮುಂದಾಗಿದ್ದಾರೆ.