Publish Date: Sun, 23 Jul 2023 (17:42 IST)
Updated Date: Sun, 23 Jul 2023 (17:44 IST)
ಬೆಂಗಳೂರು: ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾ ಬಗ್ಗೆ ಈಗಾಗಲೇ ಚಿತ್ರತಂಡ ಟೀಸರ್ ಅಪ್ ಡೇಟ್ ಒಂದನ್ನು ಕೊಟ್ಟಿತ್ತು. ಇದೀಗ ಚಿತ್ರೀಕರಣ ಯಾವಾಗ ಆರಂಭವಾಗಲಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.
ಕಿಚ್ಚ 46 ಸಿನಿಮಾವನ್ನು ತಮಿಳಿನ ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಲಿದ್ದಾರೆ. ಕಬಾಲಿ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿದ್ದ ವಿ ಕ್ರಿಯೇಷನ್ಸ್ ಈ ಸಿನಿಮಾವನ್ನು ನಿರ್ಮಿಸುತ್ತಿದೆ.
ಇದೀಗ ಆಗಸ್ಟ್ ಮೊದಲ ವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂಬ ಮಾಹಿತಿ ಬಂದಿದೆ. ಮಹಾಬಲಿಪುರಂನಲ್ಲಿ 55 ದಿನಗಳ ಸುದೀರ್ಘ ಶೂಟಿಂಗ್ ನಡೆಯಲಿದ್ದು, ಸುದೀಪ್ ಹಾಜರಿರಲಿದ್ದಾರೆ ಎಂದು ಖಚಿತವಾಗಿದೆ.