Publish Date: Sat, 29 Jul 2023 (09:30 IST)
Updated Date: Sat, 29 Jul 2023 (09:44 IST)
ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಇತ್ತೀಚೆಗೆ ಕನ್ನಡದ ಜೊತೆಗೆ ಪರಭಾಷೆಗಳಲ್ಲೂ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ‍್ಳುತ್ತಿದ್ದಾರೆ.
ಇದೀಗ ಮಾಲಿವುಡ್ ಹೀರೋ ಪೃಥ್ವಿ ರಾಜ್ ಸುಕುಮಾರನ್ ಜೊತೆ ಸಿನಿಮಾ ಮಾಡುವ ಬಗ್ಗೆ ಮಾತು ಕೇಳಿಬರುತ್ತಿದೆ. ಕನ್ನಡದ 777 ಚಾರ್ಲಿ, ಕಾಂತಾರ ಮುಂತಾದ ಸಿನಿಮಾಗಳನ್ನು ಮಲಯಾಳಂನಲ್ಲಿ ಬಿಡುಗಡೆ ಮಾಡಿದ್ದ ಪೃಥ್ವಿರಾಜ್ ಗೆ ಕನ್ನಡ ಸಿನಿಮಾ ನಟರ ಜೊತೆಗೆ ವಿಶೇಷ ನಂಟಿದೆ.
ಇದೀಗ ಸ್ನೇಹದಿಂದ ಪೃಥ್ವಿ ಸಿನಿಮಾದ ಪ್ರಮುಖ ಪಾತ್ರವೊಂದಕ್ಕೆ ಶಿವಣ್ಣನನ್ನು ಹಾಕಿಕೊಳ್ಳಲು ಮಾತುಕತೆ ನಡೆದಿದೆ ಎನ್ನಲಾಗಿದೆ. ಈಗಾಗಲೇ ಶಿವರಾಜ್ ಕುಮಾರ್ ತಮಿಳಿನಲ್ಲಿ ಕ್ಯಾಪ್ಟನ್ ಮಿಲ್ಲರ್, ಜೈಲರ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇದೀಗ ಮಾಲಿವುಡ್ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಸುದ್ದಿ ಕೇಳಿಬಂದಿದೆ.