Select Your Language

Notifications

webdunia
webdunia
webdunia
webdunia

ಟೋಬಿಯಾಗಿ ವಿಜೃಂಬಿಸಿದ ರಾಜ್ ಬಿ ಶೆಟ್ಟಿ: ಟ್ರೈಲರ್ ರಿಲೀಸ್

ಟೋಬಿಯಾಗಿ ವಿಜೃಂಬಿಸಿದ ರಾಜ್ ಬಿ ಶೆಟ್ಟಿ: ಟ್ರೈಲರ್ ರಿಲೀಸ್
ಬೆಂಗಳೂರು , ಶುಕ್ರವಾರ, 4 ಆಗಸ್ಟ್ 2023 (16:25 IST)
Photo Courtesy: Twitter
ಬೆಂಗಳೂರು: ರಾಜ್ ಬಿ ಶೆಟ್ಟಿ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ಮಾಸ್ಟರ್ ಪೀಸ್ ಕೊಡಲು ರೆಡಿಯಾಗಿದ್ದಾರೆ. ಟೋಬಿಯಾಗಿ ನಿಮ್ಮ ಮುಂದೆ ಬರುತ್ತಿದ್ದಾರೆ.

ಟೋಬಿ ಸಿನಿಮಾದ ಟ್ರೈಲರ್ ಈಗಷ್ಟೇ ಲಾಂಚ್ ಆಗಿದೆ. ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಟ್ರೈಲರ್ ಲಾಂಚ್ ಮಾಡಿದ್ದಾರೆ. ಟ್ರೈಲರ್ ನೋಡಿದ ಫ್ಯಾನ್ಸ್ ಇದು ಮತ್ತೊಂದು ಮಾಸ್ಟರ್ ಪೀಸ್ ಆಗುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ.

ಟೋಬಿಯಾಗಿ ಇಡೀ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಮತ್ತೊಮ್ಮೆ ತಮ್ಮ ಅಭಿನಯ ಸಾಮರ್ಥ್ಯವನ್ನು ಹೊರಹಾಕುತ್ತಿದ್ದಾರೆ. ಒಂದೇ ಪಾತ್ರದಲ್ಲಿ ಅಮಾಯಕ ಮತ್ತು ಭೀಭತ್ಸ ಎರಡು ತದ್ವಿರುದ್ಧ ಪಾತ್ರವನ್ನು ನಿಮ್ಮ ಮುಂದೆ ತೆರೆದಿಡುತ್ತಾರೆ. ಹಿನ್ನಲೆ ಸಂಗೀತವೂ ಅತ್ಯುತ್ತಮವಾಗಿದೆ. ಈ ಚಿತ್ರವೂ ಕನ್ನಡ ಚಿತ್ರವನ್ನು ಮತ್ತೆ ಪರಭಾಷಿಗರು ತಿರುಗಿನೋಡುವಂತೆ ಮಾಡುವ ಸೂಚನೆ ನೀಡುತ್ತಿದೆ. ಆಗಸ್ಟ್ 25 ರಂದು ಸಿನಿಮಾ ಥಿಯೇಟರ್ ಗೆ ಬರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಿಚ್ ಎಚ್ ಡಿ ಪ್ರವೇಶ ಪರೀಕ್ಷೆ ಪಾಸ್ ಮಾಡಿಕೊಂಡ ಪವಿತ್ರಾ ಲೋಕೇಶ್