Select Your Language

Notifications

webdunia
webdunia
webdunia
webdunia

ರಾಘವೇಂದ್ರ ಸ್ಟೋರ್ಸ್ ಸಿನಿಮಾ ಹೇಗಿದೆ?

ರಾಘವೇಂದ್ರ ಸ್ಟೋರ್ಸ್ ಸಿನಿಮಾ ಹೇಗಿದೆ?
ಬೆಂಗಳೂರು , ಶುಕ್ರವಾರ, 28 ಏಪ್ರಿಲ್ 2023 (17:45 IST)
Photo Courtesy: Twitter
ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ನವರಸನಾಯಕ ಜಗ್ಗೇಶ್ ನಾಯಕರಾಗಿರುವ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಇಂದು ತೆರೆ ಕಂಡಿದ್ದು, ಉತ್ತಮ ಪ್ರತಿಕ್ರಿಯೆ ಬಂದಿದೆ.

ಮೊದಲಾರ್ಧದಲ್ಲಿ ಹಾಸ್ಯ, ದ್ವಿತೀಯಾರ್ಧದಲ್ಲಿ ಸೆಂಟಿಮೆಂಟ್. ಒಟ್ಟಾರೆ ಸಿನಿಮಾದಲ್ಲಿ ಹಯವದನನಾಗಿ ಜಗ್ಗೇಶ್ ಪೂರ್ತಿ ಆವರಿಸಿಕೊಂಡಿದ್ದಾರೆ.

ಬಹಳ ದಿನಗಳ ನಂತರ ಜಗ್ಗೇಶ್ ಫ್ಲೇವರ್ ನ ಸಿನಿಮಾವೊಂದನ್ನು ನೋಡಿದ ಅನುಭವ ಪ್ರೇಕ್ಷಕರಿಗೆ ನೀಡುತ್ತದೆ. ಕೆಲವೊಂದು ಅನಗತ್ಯ ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ ಸಿನಿಮಾ ಇನ್ನಷ್ಟು ಚೆನ್ನಾಗಿರುತ್ತಿತ್ತು. ಫಸ್ಟ್ ನೈಟ್ ನದ್ದೇ ಚರ್ಚೆ ಕೊಂಚ ಅತಿ ಎನಿಸಬಹುದು. ಆದರೆ ಜಗ್ಗೇಶ್ ಜೊತೆಗೆ ದತ್ತಣ್ಣ ಕಾಂಬಿನೇಷನ್ ಇದ್ದರೆ ಪ್ರೇಕ್ಷಕರು ಇಷ್ಟಪಡದೇ ಇರುತ್ತಾರೆಯೇ? ಜೊತೆಗೆ ಅಜನೀಶ್ ಬಿ ಲೋಕನಾಥ್ ಹಿನ್ನಲೆ ಸಂಗೀತ ಸಾಥ್ ನೀಡಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಸರಾಸರಿ 5 ಕ್ಕೆ 3.5 ಅಂಕ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಸೇರಿದ ಗೀತಾ ಶಿವರಾಜ್ ಕುಮಾರ್: ಶಿವಣ್ಣ ಗೈರು