Publish Date: Thu, 27 Apr 2023 (17:40 IST)
Updated Date: Thu, 27 Apr 2023 (17:41 IST)
ಬೆಂಗಳೂರು: ಹೊಂಬಾಳೆ ಫಿಲಂಸ್ ಮತ್ತೊಂದು ಬ್ಲಾಕ್ ಬ್ಲಸ್ಟರ್ ಸಿನಿಮಾದೊಂದಿಗೆ ಬಂದಿದೆ. ನವರಸನಾಯಕ ಜಗ್ಗೇಶ್ ನಾಯಕರಾಗಿರುವ ರಾಘವೇಂದ್ರ ಸ್ಟೋರ್ಸ್ ಸಿನಿಮಾ ನಾಳೆಯಿಂದ ಥಿಯೇಟರ್ ನಲ್ಲಿ ತೆರೆ ಕಾಣಲಿದೆ.
ಇದಕ್ಕೆ ಮೊದಲು ಸೆಲೆಬ್ರಿಟಿಗಳಿಗಾಗಿ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ಇದಕ್ಕೆ ಸ್ಯಾಂಡಲ್ ವುಡ್ ನ ಗಣ್ಯಾತಿಗಣ್ಯರು ಆಗಮಿಸಿದ್ದರು.
ಸಿನಿಮಾ ನೋಡಿ ಅಭಿಪ್ರಾಯ ಹಂಚಿಕೊಂಡ ರಿಷಬ್ ಶೆಟ್ಟಿ, ಈ ಥರಾ ನಕ್ಕು ಅದೆಷ್ಟೋ ದಿನಗಳಾಗಿತ್ತು. ಒಂದೂವರೆ ಗಂಟೆ ನಿಮ್ಮನ್ನು ನಗಿಸುತ್ತೆ, ಕೊನೆ 20 ನಿಮಿಷ ಅಳಿಸುತ್ತೆ. ಜಗ್ಗೇಶ್ ಅಣ್ಣ, ದತ್ತಣ್ಣ, ಶ್ವೇತಾ ಶ್ರೀವತ್ಸ ಅವರದ್ದು ಅಮೋಘ ಅಭಿನಯ. ಥಿಯೇಟರ್ ನಲ್ಲಿ ಫ್ಯಾಮಿಲಿ ಜೊತೆ ಬಂದು ಎಂಜಾಯ್ ಮಾಡಿ ಎಂದಿದ್ದಾರೆ. ಸಿನಿಮಾ ನೋಡಿದ ಎಲ್ಲರೂ ಮೆಚ್ಚುಗೆಯ ಮಾತನಾಡಿದ್ದಾರೆ. ಬಹಳ ದಿನಗಳ ನಂತರ ರಿಯಲ್ ಜಗ್ಗೇಶ್ ಕಮ್ ಬ್ಯಾಕ್ ಮಾಡಿದ್ದಾರೆ ಎನ್ನಬಹುದು.