Select Your Language

Notifications

webdunia
webdunia
webdunia
webdunia

ಬೇಗ ಮಿಂಗಲ್ ಆಗಿ ಎಂದ ರಿಷಬ್ ಶೆಟ್ಟಿಗೆ ರಕ್ಷಿತ್ ಕೊಟ್ಟ ಉತ್ತರವೇನು?

ಬೇಗ ಮಿಂಗಲ್ ಆಗಿ ಎಂದ ರಿಷಬ್ ಶೆಟ್ಟಿಗೆ ರಕ್ಷಿತ್ ಕೊಟ್ಟ ಉತ್ತರವೇನು?
ಬೆಂಗಳೂರು , ಗುರುವಾರ, 13 ಏಪ್ರಿಲ್ 2023 (16:30 IST)
Photo Courtesy: Twitter
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿನ್ನೆ ಹೊಂಬಾಳೆ ಫಿಲಂಸ್ ನಿರ್ಮಾಣದ ಜಗ್ಗೇಶ್ ನಾಯಕರಾಗಿರುವ ರಾಘವೇಂದ್ರ ಸ್ಟೋರ್ಸ್ ಸಿನಿಮಾದ ಸಿಂಗಲ್ಸ್ ಹಾಡನ್ನು ಬಿಡುಗಡೆ ಮಾಡಿದ್ದರು.

ಬ್ರಹ್ಮಚಾರಿಗಳಾಗಿರುವವರಿಗೆ ಹೇಳಿ ಮಾಡಿಸಿದಂತಿರುವ ಈ ತಮಾಷೆಯ ಹಾಡನ್ನು ರಕ್ಷಿತ್ ಶೆಟ್ಟಿ ಲಾಂಚ್ ಮಾಡಿದ್ದರು. ಇದನ್ನು ಲಾಂಚ್ ಮಾಡಿದ ಬಳಿಕ ರಕ್ಷಿತ್ ಹಾಡು ತುಂಬಾ ಚೆನ್ನಾಗಿದೆ ನೀವೂ ನೋಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ರಿಷಬ್ ಶೆಟ್ಟಿ, ‘ಒಳ್ಳೆಯವರ ಕೈನಲ್ಲಿ ಹಾಡು ರಿಲೀಸ್ ಮಾಡ್ಸಿದ್ದೀರಿ. ಸಿಂಗಲ್ ಆಗಿರೋರು ಎಲ್ಲಾ ಬೇಗ ಮಿಂಗಲ್ ಆಗೋ ಹಾಗೆ ಆಗ್ಲಿ’ ಎಂದು ರಕ್ಷಿತ್ ಕಾಲೆಳೆದಿದ್ದಾರೆ.ಇದಕ್ಕೆ ಉತ್ತರಿಸಿರುವ ರಕ್ಷಿತ್ ‘ಆಯ್ತಣ್ಣೋ.. ಗೊತ್ತಾಯ್ತು ಬಿಡಿ’ ಎಂದು ನಕ್ಕಿದ್ದಾರೆ. ರಕ್ಷಿತ್ ಮದುವೆ ಬಗ್ಗೆ ಆಗಾಗ್ಗೆ ಪ್ರಶ್ನೆಗಳು ಎದುರಾಗುತ್ತಲೇ ಇರುತ್ತವೆ. ಇದಕ್ಕೇ ರಿಷಬ್ ಗೆಳೆಯನ ಕಾಲೆಳೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿನೋದ್ ರಾಜ್ ಗೆ ಮದುವೆಯಾಗಿದ್ದು ನಿಜ ಎಂದು ಒಪ್ಪಿಕೊಂಡ ಲೀಲಾವತಿ