Publish Date: Tue, 11 Apr 2023 (09:10 IST)
Updated Date: Tue, 11 Apr 2023 (09:11 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ದಂಪತಿಯ ಮುದ್ದಿನ ಮಕ್ಕಳ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
ರಾಧಿಕಾ ಆಗಾಗ ತಮ್ಮ ಮಕ್ಕಳ ತುಂಟಾಟಗಳು, ಸುಂದರ ಕ್ಷಣಗಳ ಫೋಟೋಗಳನ್ನು, ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸುತ್ತಿರುತ್ತಾರೆ.
ಇದೀಗ ರಾಧಿಕಾ ಐರಾ ಬೆನ್ನ ಮೇಲೆ ಯಥರ್ವ್ ಕುಳಿತು ತುಂಟಾಟವಾಡುತ್ತಿರುವ ವಿಡಿಯೋವನ್ನು ಪ್ರಕಟಿಸಿದ್ದು, ಇಬ್ಬರೂ ಒಬ್ಬರ ಬೆನ್ನಿಗೆ ಒಬ್ಬರಾಗಿ ಸದಾ ಇರುತ್ತಾರೆ ಎಂದು ಬರೆದುಕೊಂಡಿದ್ದಾರೆ. ಯಶ್ ಮಕ್ಕಳ ತುಂಟಾಟದ ವಿಡಿಯೋ ಈಗ ವೈರಲ್ ಆಗಿದೆ.