Publish Date: Sun, 02 Apr 2023 (09:10 IST)
Updated Date: Sun, 02 Apr 2023 (09:29 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾ ಬಿಡುಗಡೆಯಾಗಿ ಒಂದು ವರ್ಷವಾಗುತ್ತಾ ಬಂದಿದೆ. ಆದರೆ ಇದುವರೆಗೆ ಯಶ್ ಮುಂದಿನ ಸಿನಿಮಾ ಘೋಷಣೆ ಮಾಡಿಲ್ಲ.
ಯಶ್ 19 ಗಾಗಿ ಕಾದೂ ಕಾದೂ ಅಭಿಮಾನಿಗಳೂ ಸುಸ್ತಾಗಿದ್ದಾರೆ. ಅಲ್ಲದೆ, ಯಶ್ ಮುಂದಿನ ಸಿನಿಮಾ ಯಾರ ಜೊತೆಗಿರಬಹುದು ಎಂಬ ಬಗ್ಗೆ ಹಲವು ಊಹಾಪೋಹಗಳೂ ಇತ್ತು. ಆದರೆ ಇದುವರೆಗೆ ಯಾವುದೂ ಘೋಷಣೆಯಾಗಿರಲಿಲ್ಲ.
ಮೂಲಗಳ ಪ್ರಕಾರ ತಮ್ಮ ಅದೃಷ್ಟದ ದಿನ ಏಪ್ರಿಲ್ 14 ಕ್ಕಾಗಿ ಕಾದಿದ್ದಾರೆ. ಇದೇ ದಿನ ಯಶ್ ಮುಂದಿನ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಬಹುದು ಎನ್ನಲಾಗಿದೆ. ಏಪ್ರಿಲ್ 14 ರಂದು ಕೆಜಿಎಫ್ 2 ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿತ್ತು. ಹೀಗಾಗಿ ಇದೇ ದಿನದಂದೇ ಹೊಸ ಸಿನಿಮಾ ಘೋಷಣೆ ಮಾಡಬಹುದು ಎನ್ನಲಾಗಿದೆ.