Select Your Language

Notifications

webdunia
webdunia
webdunia
webdunia

ವಿನೋದ್ ರಾಜ್ ಗೆ ಮದುವೆಯಾಗಿದ್ದು ನಿಜ ಎಂದು ಒಪ್ಪಿಕೊಂಡ ಲೀಲಾವತಿ

ವಿನೋದ್ ರಾಜ್ ಗೆ ಮದುವೆಯಾಗಿದ್ದು ನಿಜ ಎಂದು ಒಪ್ಪಿಕೊಂಡ ಲೀಲಾವತಿ
ಬೆಂಗಳೂರು , ಗುರುವಾರ, 13 ಏಪ್ರಿಲ್ 2023 (09:58 IST)
ಬೆಂಗಳೂರು: ಇತ್ತೀಚೆಗೆ ಹಿರಿಯ ನಟಿ ಲೀಲಾವತಿ ಮತ್ತು ಅವರ ಪುತ್ರ ವಿನೋದ್ ರಾಜ್ ವೈಯಕ್ತಿಕ ವಿಚಾರಗಳು ಮಾಧ್ಯಮಗಳಲ್ಲಿ ಹರಿದಾಡಿತ್ತು.

ಲೀಲಾವತಿ ಪತಿ ಮಹಾಲಿಂಗ ಭಾಗವತರ್. ಅವರ ಆಸ್ತಿಪತ್ರದಲ್ಲಿ ಇದು ಉಲ್ಲೇಖವಾಗಿದೆ. ಮಗ ವಿನೋದ್ ರಾಜ್ ಗೆ ಮದುವೆಯಾಗಿದೆ. ಅವರ ಪತ್ನಿ, ಮಗ ತಮಿಳುನಾಡಿನಲ್ಲಿದ್ದಾರೆ. ಮಗ ಇಂಜಿನಿಯರಿಂಗ್ ಓದುತ್ತಿದ್ದಾನೆ ಎಂದು ಇತ್ತೀಚೆಗೆ ಸುದ್ದಿ ಹರಿದಾಡಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಲೀಲಾವತಿ ಮತ್ತು ಪುತ್ರ ವಿನೋದ್ ರಾಜ್ ನಮ್ಮ ವೈಯಕ್ತಿಕ ವಿಚಾರ ಕೆದಕಬೇಡಿ. ಅಮ್ಮ ಕರ್ನಾಟಕದ ಆಸ್ತಿ. ಈ ಇಳಿ ವಯಸ್ಸಿನಲ್ಲಿ ಅವರನ್ನು ಆರಾಮವಾಗಿ ಬದುಕಲು ಬಿಡಿ ಎಂದು ವಿನೋದ್ ಮನವಿ ಮಾಡಿದ್ದಾರೆ. ಇನ್ನು ವಿನೋದ್ ಗೆ ಮದುವೆಯಾಗಿರುವುದು ನಿಜ ಎಂದು ಲೀಲಾವತಿಯವರು ಒಪ್ಪಿಕೊಂಡಿದ್ದಾರೆ. ನನ್ನ ಹತ್ತಿರ ದುಡ್ಡಿರಲಿಲ್ಲ. ಅದಕ್ಕೆ ತಿರುಪತಿ ಬೆಟ್ಟದಲ್ಲಿ ಸರಳವಾಗಿ ಮದುವೆ ಮಾಡಿದ್ದೇನೆ. ಸೊಸೆ, ಮೊಮ್ಮಗ ಇಬ್ಬರೂ ಚೆನ್ನಾಗಿದ್ದಾರೆ. ಅವರಿಗೆ ಯಾವುದೇ ಕೊರತೆ ಮಾಡಿಲ್ಲ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ನಟಿ ಸಮಂತಾ ಋತು ಪ್ರಭು ಆರೋಗ್ಯದಲ್ಲಿ ಏರುಪೇರು