ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ನವರಸನಾಯಕ ಜಗ್ಗೇಶ್ ನಾಯಕರಾಗಿರುವ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಇಂದಿನಿಂದ ಥಿಯೇಟರ್ ನಲ್ಲಿ ತೆರೆ ಕಾಣುತ್ತಿದೆ.
ಈ ಸಿನಿಮಾದ ಪ್ರೀಮಿಯರ್ ಶೋ ವೀಕ್ಷಿಸಿದ ಸೆಲೆಬ್ರಿಟಿಗಳು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. ವಿಶೇಷವೆಂದರೆ ಚಿತ್ರತಂಡ ಸಿನಿಮಾ ಆರಂಭದಲ್ಲೇ ಪುನೀತ್ ರಾಜ್ ಕುಮಾರ್ ಗೆ ವಿಶೇಷ ಗೌರವ ಸಲ್ಲಿಸಿದೆ. ನಿಮ್ಮ ಬದುಕು ನಮಗೆ ಮಾದರಿ. ಈ ಚಿತ್ರ ನಿಮಗೆ ಅರ್ಪಣೆ ಎಂದು ಪುನೀತ್ ಫೋಟೋ ಸಮೇತ ಗೌರವ ನೀಡಿದೆ.
ಬಳಿಕ ಪುನೀತ್ ಸಮಾಜಸೇವೆಯ ಬಗ್ಗೆ ಗುಣಗಾನ ಮಾಡಿ ಎರಡು ಸಾಲುಗಳನ್ನು ಹಾಕಲಾಗಿದೆ. ನಾವು ಇನ್ನೊಬ್ಬರಿಗೆ ಮಾಡೋ ಸಹಾಯ ನಮಗೆ ಹಿರಿಮೆ ಆಗಿದ್ದರೂ ಸಹಾಯ ಪಡೆದವರಿಗೆ ಕೀಳರಿಮೆ ಆಗಬಾರದು. ನಮ್ಮ ಸೇವೆ ಪರರಿಗೆ ತಿಳಿಸಿ ಮಾಡಿದರೆ ಪ್ರಚಾರ. ತಿಳಿಯದ ಹಾಗೆ ಮಾಡಿದರೆ ವಿಚಾರ ಏನೂ ಬಯಸದೆ ಆತ್ಮತೃಪ್ತಿಗೆ ಸೇವೆ ಮಾಡುವವನು ಪರಮಾತ್ಮನಿಗೆ ಹತ್ತಿರವಾಗುತ್ತಾನೆ, ಪರಮಾತ್ಮನಾಗುತ್ತಾನೆ ಎಂಬ ಸಾಲುಗಳನ್ನು ಹಾಕಿ ಅಗಲಿದ ಪ್ರೀತಿಯ ಅಪ್ಪುಗೆ ಹೊಂಬಾಳೆ ಫಿಲಂಸ್ ಗೌರವ ಸಲ್ಲಿಸಿದೆ.