Publish Date: Fri, 28 Apr 2023 (06:50 IST)
Updated Date: Fri, 28 Apr 2023 (06:58 IST)
ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ನವರಸನಾಯಕ ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಇಂದಿನಿಂದ ತೆರೆಗೆ ಬರುತ್ತಿದೆ.
ಕೆಜಿಎಫ್, ಕಾಂತಾರದಂತಹ ದೊಡ್ಡ ಬಜೆಟ್ ಸಿನಿಮಾ ಮಾಡಿರುವ ಹೊಂಬಾಳೆ ಫಿಲಂಸ್ ನಿರ್ಮಾಣ ಎಂದರೆ ಅಭಿಮಾನಿಗಳಲ್ಲಿ ಕುತೂಹಲ ಇದ್ದೇ ಇರುತ್ತದೆ. ಜೊತೆಗೆ ಜಗ್ಗೇಶ್ ಹಾಸ್ಯ ಪ್ರಧಾನ ಸಿನಿಮಾ ಎಂದರೆ ನೋಡಲು ಕಾಯುವ ಪ್ರೇಕ್ಷಕ ವರ್ಗವೇ ಇದೆ.
ಈ ಸಿನಿಮಾದಲ್ಲಿ ಜಗ್ಗೇಶ್ ಅವಿವಾಹಿತ ಅಡುಗೆ ಭಟ್ಟನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹಾಸ್ಯದ ಜೊತೆಗೆ ಲೈಟಾಗಿ ಮೆಸೇಜ್ ಕೂಡಾ ಸಿನಿಮಾದಲ್ಲಿದೆ. ರಾಜಕುಮಾರ ಖ್ಯಾತಿಯ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿದ್ದಾರೆ. ಥಿಯೇಟರ್ ಗೆ ಹೋಗಿ ಎರಡೂವರೆ ಗಂಟೆ ಭರಪೂರ ಮನರಂಜನೆ ಅನುಭವಿಸಲು ತಕ್ಕ ಸಿನಿಮಾ ಇದು.