ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆಗೆ ಇಂದು ಮತ್ತೊಬ್ಬ ಕನ್ನಡದ ಸ್ಟಾರ್ ನಟ ನವರಸನಾಯಕ ಜಗ್ಗೇಶ್ ಅವರೂ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ನವರಸನಾಯಕ ಜಗ್ಗೇಶ್ ಇಂದು 60 ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅವರು ಇತ್ತೀಚೆಗೆ ತಮ್ಮ ನೆಚ್ಚಿನ ನಾಯಕ ಪ್ರಧಾನಿ ಮೋದಿಯವರನ್ನು ಕುಟುಂಬ ಸಮೇತ ಭೇಟಿಯಾಗಿ ಆಶೀರ್ವಾದ ಪಡೆದು ಬಂದಿದ್ದರು.
ಜಗ್ಗೇಶ್ ಪ್ರತೀ ಬಾರಿಯೂ ತಮ್ಮ ಹುಟ್ಟುಹಬ್ಬವನ್ನು ತಮ್ಮ ಆರಾಧ‍್ಯ ದೈವ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಕಳೆಯುತ್ತಾರೆ. 1983 ರಲ್ಲಿ ಚಿತ್ರರಂಗಕ್ಕೆ ಇಬ್ಬನಿ ಕರಗಿತು ಸಿನಿಮಾ ಮೂಲಕ ಎಂಟ್ರಿ ಕೊಟ್ಟ ಜಗ್ಗೇಶ್ ಇಂದು ನವರಸನಾಯಕನಾಗಿ ಇದವರೆಗೆ ಸುಮಾರು 125 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇನ್ನೂ ಎರಡು ಸಿನಿಮಾಗಳು ಬಿಡುಗಡೆಗೆ ಬಾಕಿ ಇವೆ. ಇದರ ನಡುವೆ ಅವರು ಬಿಜೆಪಿ ಪಕ್ಷದಿಂದ ಸಂಸದರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ನಮ್ಮ ಕಡೆಯಿಂದ ಹ್ಯಾಪೀ ಬರ್ತ್ ಡೇ.