ರಾಜ್ಯದ ವಿವಿಧ ಕಡೆಯಲ್ಲಿ ಪುನೀತ್ ಹುಟ್ಟು ಹಬ್ಬ ಆಚರಣೆ ಮಾಡಲಾಗ್ತಿದೆ.ಬೆಂಗಳೂರಿನ ಕಂಠೀರವ ಸ್ಟುಡಿಯೋ ದಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡಲಾಗ್ತಿದ್ದು,ಪುನೀತ್ ಸಮಾಧಿಯ ಕಡೆ ಅಭಿಮಾನಿಗಳ ಸಾಗರಹರುದು ಬರುತ್ತಿದೆ.
ಈಗಾಗಲೇ ಪುನೀತ್ ರಾಜ್ಕುಮಾರ್ ಸಮಾಧಿಯನ್ನು ಅಲಂಕರಿಸಲಾಗಿದೆ.ಗಂಧದ ಗುಡಿ ಸಾಕ್ಷ್ಯಚಿತ್ರ ಪುನೀತ್ ಅವರ ಕನಸಿನ ಪ್ರಾಜೆಕ್ಟ್ .ಪುನೀತ್ ಅವರ ಮೊದಲ ವರ್ಷದ ಪುಣ್ಯತಿಥಿಗೂ ಒಂದು ದಿನ ಮೊದಲು ಬಿಡುಗಡೆ ಮಾಡಲಾಗಿತ್ತು.ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ 'ಗಂಧದ ಗುಡಿ' ಪ್ರಸಾರ ಆರಂಭಿಸಲಿದೆ. ಇದು ಅಭಿಮಾನಿಗಳ ಪಾಲಿಗೆ ವಿಶೇಷ ಗಿಫ್ಟ್ ಆಗಿದೆ.