Publish Date: Thu, 23 Jul 2020 (14:10 IST)
Updated Date: Thu, 23 Jul 2020 (14:12 IST)
ಬೆಂಗಳೂರು: ಕೊರೋನಾ ನಮ್ಮೆಲ್ಲರ ದೈನಂದಿನ ಬದುಕನ್ನು ಕಿತ್ತುಕೊಂಡಿದೆ. ಎಲ್ಲೂ ಹೊರಗೆ ಸುತ್ತಾಡುವಂತಿಲ್ಲ, ಮಜಾ ಮಾಡುವಂತಿಲ್ಲ. ಒಂದು ರೀತಿಯ ಕಟ್ಟು ನಿಟ್ಟಿನ ಬದುಕು. ಇದರಿಂದಾಗಿ ತಾನು ಹಲವು ವಿಷಯಗಳನ್ನು ಮಿಸ್ ಮಾಡಿಕೊಳ್ಳುತ್ತಿರುವೆ ಎಂದು ನಟಿ ರಾಧಿಕಾ ಪಂಡಿತ್ ಹೇಳಿಕೊಂಡಿದ್ದಾರೆ.
ಕೊರೋನಾದಿಂದಾಗಿ ಬೀಚ್ ಗೆ ಹೋಗುವುದನ್ನು, ಅಲ್ಲಿ ಮಕ್ಕಳ ಜತೆ ಆಟವಾಡುವುದನ್ನು, ಫ್ರೆಂಡ್ಸ್ ಭೇಟಿಯಾಗುವುದನ್ನು ಎಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಜೀವನ ಮತ್ತೆ ನಾರ್ಮಲ್ ಆದರೆ ಸಾಕಪ್ಪಾ. ನೀವು ಈ ಸಮಯದಲ್ಲಿ ಏನು ಮಿಸ್ ಮಾಡಿಕೊಳ್ಳುತ್ತೀರಿ ಎಂದು ರಾಧಿಕಾ ಅಭಿಮಾನಿಗಳಿಗೆ ಪ್ರಶ್ನೆ ಮಾಡಿದ್ದಾರೆ. ಜತೆಗೆ ಮಿಸ್ ಮಾಡಿಕೊಂಡರೂ ಸದ್ಯದ ಪರಿಸ್ಥಿತಿಯಲ್ಲಿ ನಾವು ಮನೆಯಲ್ಲೇ ಸುರಕ್ಷಿತವಾಗಿರೋಣ ಎಂದು ಮನವಿ ಮಾಡಿದ್ದಾರೆ.