Publish Date: Thu, 23 Jul 2020 (12:24 IST)
Updated Date: Thu, 23 Jul 2020 (12:25 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಗೆಳೆಯ, ನಿರ್ದೇಶಕ ರಿಷಬ್ ಶೆಟ್ಟಿ ಬೆಳ್ಳಂ ಬೆಳಿಗ್ಗೇ ಕಂಗ್ರಾಜ್ಯಲೇಷನ್ಸ್ ಅಂತ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದಾರೆ. ಅಷ್ಟಕ್ಕೂ ಈವತ್ತು ಏನು ಸ್ಪೆಷಲ್ ಅಂತೀರಾ? ಸ್ಪೆಷಲ್ ಖಂಡಿತಾ ಇದೆ. ಅದಕ್ಕಾಗಿ ಈ ಸುದ್ದಿ ಓದಿ.
ರಕ್ಷಿತ್ ಚಿತ್ರರಂಗಕ್ಕೆ ಬಂದು ಇಂದಿಗೆ 10 ವರ್ಷವಾಗಿದೆ. ಈ ಆನಿವರ್ಸರಿ ಸಂಭ್ರಮಕ್ಕೆ ರಿಷಬ್ ತಮ್ಮ ಗೆಳೆಯನಿಗೆ ಈ ರೀತಿ ವಿಶ್ ಮಾಡಿದ್ದಾರೆ. ರಿಷಬ್ ಮಾತ್ರವಲ್ಲದೆ, ರಕ್ಷಿತ್ ಅಭಿಮಾನಿಗಳೂ ವಿಶೇಷ ಫೋಟೋ, ಸಿಡಿಪಿಗಳ ಮೂಲಕ ಸಿಂಪಲ್ ಸ್ಟಾರ್ ಗೆ ಶುಭಾಷಯ ಕೋರುತ್ತಿದ್ದಾರೆ.
‘ಮಗಾ ಕನ್ನಡ ಚಿತ್ರರಂಗವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕೆಂಬ ನಿನ್ನ ಕನಸು, ಆಸೆ, ಹಂಬಲ ಎಲ್ಲದಕ್ಕೂ ಮೀರಿದ್ದು. ನಿಮ್ಮ ಮುಂದಿನ ಸಿನಿ ಜೀವನ ಇನ್ನಷ್ಟು ಸಿಹಿಯಾಗಿರಲಿ ಎಂದು ಹಾರೈಸುವೆ’ ಎಂದು ರಿಷಬ್ ಗೆಳೆಯನಿಗೆ ವಿಶ್ ಮಾಡಿದ್ದಾರೆ.