Publish Date: Wed, 06 Jan 2021 (17:15 IST)
Updated Date: Wed, 06 Jan 2021 (17:16 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತಮ್ಮ ಆಪ್ತರೊಬ್ಬರ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕುಮುಟಾಗೆ ಬಂದಿಳಿದ್ದಾರೆ.
ಈ ವೇಳೆ ಅವರನ್ನು ಭೇಟಿಯಾಗಲು ಜನಸಾಗರವೇ ಹರಿದುಬಂದಿತ್ತು. ಪುನೀತ್ ಆಗಮಿಸಿದ ಸುದ್ದಿ ತಿಳಿದು ನೂರಾರು ಜನ ನೆರೆದಿದ್ದರು. ಬಳಿಕ ಅವರೊಂದಿಗೆ ಸೆಲ್ಫೀ ತೆಗೆಸಿಕೊಳ್ಳಲು ಮುಗಿಬಿದ್ದರು. ತಮ್ಮ ಆಪ್ತರ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾದ ಪುನೀತ್ ಬಳಿಕ ಗೋಕರ್ಣಗೆ ಭೇಟಿ ನೀಡಿದ್ದಾರೆ.