Publish Date: Wed, 06 Jan 2021 (09:31 IST)
Updated Date: Wed, 06 Jan 2021 (09:33 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತೀರಾ ಅಗತ್ಯವಿದ್ದರೆ ಮಾತ್ರ ಸಾಮಾಜಿಕ ಜಾಲತಾಣ ಬಳಸುತ್ತಾರೆ. ಆದರೆ ಈಗ ಅಪರೂಪಕ್ಕೆ ಫೇಸ್ ಬುಕ್ ಲೈವ್ ಬರುತ್ತಿದ್ದಾರೆಂಬ ಸುದ್ದಿ ಬಂದಿದೆ.
ಜನವರಿ 10 ರಂದು ಬೆಳಿಗ್ಗೆ 11 ಗಂಟೆಗೆ ದರ್ಶನ್ ಫೇಸ್ ಬುಕ್ ಮುಖಾಂತರ ಲೈವ್ ಬರಲಿದ್ದಾರಂತೆ. ಹಾಗಿದ್ದರೆ ಅಂದು ಅಭಿಮಾನಿಗಳೆಲ್ಲಾ ಕಾಯುತ್ತಿರುವ ರಾಬರ್ಟ್ ಸಿನಿಮಾ ಬಿಡುಗಡೆ ದಿನಾಂಕವನ್ನು ಹೊರಹಾಕುತ್ತಾರಾ ಎಂಬುದು ಈಗ ಪ್ರೇಕ್ಷಕರ ಪ್ರಶ್ನೆ. ಈಗಾಗಲೇ ಯುವರತ್ನ, ಕೋಟಿಗೊಬ್ಬ 3 ಸಿನಿಮಾ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಹೀಗಾಗಿ ರಾಬರ್ಟ್ ಬಗ್ಗೆಯೂ ದರ್ಶನ್ ಏನಾದರೂ ಸಿಹಿ ಸುದ್ದಿ ಕೊಡಲೆಂದೇ ಲೈವ್ ಬರುತ್ತಿದ್ದಾರಾ? ಕಾದು ನೋಡಬೇಕಿದೆ.